ಗೂಡಿನಬಳಿ ಯುವಕರ ಜೀವ ಕಾರುಣ್ಯ ಸೇವೆ ಹೊರತಾಗಿಯೂ ಪ್ರಾಣ ಬಿಟ್ಟ ಕಲ್ಲಡ್ಕದ ನಿಶಾಂತ್ - Karavali Times ಗೂಡಿನಬಳಿ ಯುವಕರ ಜೀವ ಕಾರುಣ್ಯ ಸೇವೆ ಹೊರತಾಗಿಯೂ ಪ್ರಾಣ ಬಿಟ್ಟ ಕಲ್ಲಡ್ಕದ ನಿಶಾಂತ್ - Karavali Times

728x90

24 May 2020

ಗೂಡಿನಬಳಿ ಯುವಕರ ಜೀವ ಕಾರುಣ್ಯ ಸೇವೆ ಹೊರತಾಗಿಯೂ ಪ್ರಾಣ ಬಿಟ್ಟ ಕಲ್ಲಡ್ಕದ ನಿಶಾಂತ್

ನಿಶಾಂತ್ ಮೃತದೇಹ
ಜೀವರಕ್ಷಕ ಕಾರ್ಯಕ್ಕೆ ಧುಮುಕಿದ ಮುಹಮ್ಮದ್ ಮಮ್ಮು ಗೂಡಿನಬಳಿ

ಜೀವರಕ್ಷಕ ಕಾರ್ಯಕ್ಕೆ ಧುಮುಕಿದ ಶಮೀರ್ ಗೂಡಿನಬಳಿ
ಜೀವರಕ್ಷಕ ಕಾರ್ಯಕ್ಕೆ ಧುಮುಕಿದ ಝಿಯಾದ್ ಗೂಡಿನಬಳಿ

ಜೀವರಕ್ಷಕ ಕಾರ್ಯಕ್ಕೆ ಧುಮುಕಿದ ತೌಸೀಫ್ ಗೂಡಿನಬಳಿ
ನದಿಗೆ ಸೇತುವೆ ಮೇಲಿಂದಲೇ ಹಾರುತ್ತಿರುವ ಈಜುಪಟು ಯುವಕರು
ನದಿಗೆ ಸೇತುವೆ ಮೇಲಿಂದಲೇ ಹಾರುತ್ತಿರುವ ಈಜುಪಟು ಯುವಕರು
ನದಿಗೆ ಸೇತುವೆ ಮೇಲಿಂದಲೇ ಹಾರುತ್ತಿರುವ ಈಜುಪಟು ಯುವಕರು
ಯುವಕನ ಬಾಯಿಗೆ ಪಂಪ್ ಮಾಡಿದ ಆರಿಫ್ ಹೈವೇ
ಯುವಕನ ಬಾಯಿಗೆ ಪಂಪ್ ಮಾಡಿದ ಆರಿಫ್ ಹೈವೇ
ಯುವಕನ ಬಾಯಿಗೆ ಪಂಪ್ ಮಾಡಿದ ಆರಿಫ್ ಹೈವೇ
ನದಿಯಿಂದ ಯುವಕನನ್ನು ಮೇಲಕ್ಕೆತ್ತುತ್ತಿರುವ ದೃಶ್ಯ
ದಡದಲ್ಲಿ ಪ್ರಥಮ ಚಿಕಿತ್ಸೆ ನೀಡುತ್ತಿರುವ ಯುವಕರು

ನದಿಯಲ್ಲಿ ರಕ್ಷಣಾ ಕಾರ್ಯಾಚರಣೆಯ ದೃಶ್ಯ



ಈದುಲ್ ಫಿತ್ರ್ ದಿನ ಲಾಕ್ ಡೌನ್ ಹಾಗೂ ಕೊರೋನಾ ಭೀತಿಗೂ ಬೆಲೆ ನೀಡದೆ ಜೀವ ಉಳಿಸಲು ಬಾಯಿ ಮೂಲಕ ಕೃತಕ ಪಂಪ್ ಮಾಡಿದ ಯುವಕರ ಮಾನವೀಯತೆಗೆ ವ್ಯಾಪಕ ಶ್ಲಾಘನೆ


ಯುವಕನ ಜೀವ ಉಳಿಸಲಾಗಿಲ್ಲ ಎಂಬ ವೇದನೆ ನೇತ್ರಾವತಿ ವೀರರಿಗೆ


ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಯಿತು ಬಂಟ್ವಾಳ 



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಹಾರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕ £ನಿÁಸಿ ಚಂದ್ರಹಾಸ ಮೂಲ್ಯ ಎಂಬವರ ಪುತ್ರ ನಿಶಾಂತ್ (29) ಎಂಬ ಯುವಕನ ಜೀವ ಉಳಿಸಲು ಸ್ಥಳೀಯ ಗೂಡಿನಬಳಿ ಹಾಗೂ ಅಕ್ಕರಂಗಡಿ ಯುವಕರು ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದರೂ ಫಲಕಾರಿಯಾಗದೆ ನಿಶಾಂತ್ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

  ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿಯಾಗಿರುವ £ಶಾಂತ್ ದ್ವಿಚಕ್ರ ವಾಹನದಲ್ಲಿ ಬಂದು ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯ ಒಂದು ಬದಿಯಲ್ಲಿ ತಾನು ಬಂದಿದ್ದ ದ್ವಿಚಕ್ರ ವಾಹನವನ್ನುಅಲ್ಲೇ ನಿಲ್ಲಿಸಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ. ನಿಶಾಂತ್ ನದಿಗೆ ಹಾರಿದ ಘಟನೆಯನ್ನು ಕಂಡ ಗೂಡಿನಬಳಿಯ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು ಗೂಡಿನಬಳಿ, ಝಿಯಾದ್ ಗೂಡಿನಬಳಿ, ಶಮೀರ್ ಗೂಡಿನಬಳಿ, ಮುಖ್ತಾರ್ ಅಕ್ಕರಂಗಡಿ, ತೌಸೀಫ್ ಗೂಡಿನಬಳಿ ನೇತೃತ್ವದ ಯುವಕರ ತಂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇತುವೆ ಮೇಲಿಂದಲೇ ನದಿಗೆ ಧುಮುಕಿ ನೀರಿನಲ್ಲಿ ಮುಳುಗೇಳುತ್ತಿದ್ದ ನಿಶಾಂತ್‍ನನ್ನು ನದಿಯಿಂದ ಬಹಳಷ್ಟು ಶ್ರಮಪಟ್ಟು ಮೇಲಕ್ಕೆತ್ತಿ ದಡಕ್ಕೆ ತಂದಿದ್ದಾರೆ. ಬಳಿಕ ದಡದಲ್ಲಿ ಆರೀಫ್ ಹೈವೇ ಅವರು ತನ್ನ ಬಾಯಿಯಿಂದಲೇ ನಿಶಾಂತ್ ಬಾಯಿಗೆ ಗಾಳಿಯನ್ನು ಮೂಲಕ ಪಂಪ್ ಮಾಡಿ ಕೃತಕ ಉಸಿರಾಟದ ವ್ಯವಸ್ಥೆಗೆ ಪ್ರಯತ್ನಿಸಿ ಸಕಲ ಪ್ರಥಮ ಚಿಕಿತ್ಸೆಯನ್ನು ಸ್ಥಳದಲ್ಲೇ ನೀಡಿದರು. ಬಳಿಕ ಜೀವನ್ಮರಣ ಹೋರಾಟದಲ್ಲಿದ್ದ ನಿಶಾಂತ್‍ನನ್ನು ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಮುಹಮ್ಮದ್ ಇಕ್ಬಾಲ್ ಪರ್ಲಿಯಾ ಅವರ ಕಾರಿನಲ್ಲಿ ಹಾಕಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತಲುಪಿಸಿದರಾದರೂ ಯುವಕ ನಿಶಾಂತ್ ಮಾತ್ರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದು ಇಡೀ ಸನ್ನಿವೇಶ ದುಃಖಾಂತ್ಯಗೊಂಡಿತು.

ನದಿಯ ದಡಕ್ಕೆ ನಡೆದು, ಓಡಿ ಸಾಗಿದರೆ ಸಮಯ ಹಿಡಿದು ಯುವಕ ಸಾವನ್ನಪ್ಪುತ್ತಾನೆ ಎಂದು ಅವಸರಪಟ್ಟ ಯುವಕರು ಸೇತುವೆಯ ಮೇಲಿಂದಲೇ ನೇರವಾಗಿ ನದಿ ನೀರಿಗೆ ಹಾರುವ ರಿಸ್ಕ್ ತಗೆದುಕೊಂಡಿದ್ದರು. ಮೊದಲಿಗೆ ಮುಹಮ್ಮದ್ ಮಮ್ಮು ಗೂಡಿನಬಳಿ ಅವರು ನದಿಗೆ ಹಾರಿದರೆ ಬಳಿಕ ಉಳಿದ ಮಿತ್ರರು ಸಾಥ್ ನದಿಗೆ ಹಾರಿ ಸಾಥ್ ನೀಡಿದ್ದಾರೆ. ದಡದಲ್ಲಿ ಆರಿಫ್ ಹೈವೇ ಅವರು ಬಾಯಿಗೆ ಗಾಳಿ ಪಂಪ್ ಮಾಡುವ ರಿಸ್ಕ್ ತೆಗೆದುಕೊಂಡರಾದರೂ ಯುವಕನ ಜೀವ ಉಳಿಸಲಾಗಿಲ್ಲ ಎಂಬುದೇ ಯುವಕರ ದುಃಖಕ್ಕೆ ಕಾರಣವಾಯಿತು. 

    ಈದುಲ್ ಫಿತ್ರ್ ಹಬ್ಬದ ಸಂಭ್ರಮದಲ್ಲಿದ್ದ ಮುಸ್ಲಿಂ ಯುವಕರು ತಕ್ಷಣ ಕಾರ್ಯಪ್ರವೃತ್ತರಾಗಿ ನದಿಗೆ ದುಮುಕಿ ಕೊರೋನಾ ಭೀತಿಯನ್ನೂ ಲೆಕ್ಕಿಸದೆ ಮಾನವ ಜೀವವೊಂದನ್ನು ಉಳಿಸಲು ನಡೆಸಿದ ಸಾಹಸ ಘಟನೆಯನ್ನು ಸ್ಥಳದಲ್ಲಿದ್ದ ಕೆಲವರು ವೀಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಯುವಕರ ಜೀವ ಕಾರುಣ್ಯದ ಸೇವಾ ಕಾರ್ಯದ ವೀಡಿಯೊ ಕ್ಷಣ ಮಾತ್ರದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಗೂಡಿನಬಳಿ ಹಾಗೂ ಅಕ್ಕರಂಗಡಿ ಯುವಕರ ಸಾಹಸ ಹಾಗೂ ಜಾತಿ, ಕೊರೋನಾ ವೈರಸ್, ಲಾಕ್‍ಡೌನ್ ಹಾಗೂ ಈದ್ ಸಂಭ್ರಮ ಇದ್ಯಾವುದೂ ಯುವಕರ ಜೀವ ಕಾರುಣ್ಯ ಸೇವೆಗೆ ಅಡ್ಡಿಯಾಗಿಲ್ಲ ಎಂಬುದು ಸರ್ವತ್ರ ಶ್ಲಾಘನೆಗೆ ಕಾರಣವಾಗಿದೆ.  

    ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದರೂ ಜೀವ ಉಳಿಸಲಾಗಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ ಎಂದು ನೇತ್ರಾವತಿ ವೀರ ಯುವಕರು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ನಿಶಾಂತ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಗೂಡಿನಬಳಿ ಯುವಕರ ಜೀವ ಕಾರುಣ್ಯ ಸೇವೆ ಹೊರತಾಗಿಯೂ ಪ್ರಾಣ ಬಿಟ್ಟ ಕಲ್ಲಡ್ಕದ ನಿಶಾಂತ್ Rating: 5 Reviewed By: karavali Times
Scroll to Top