ಬಂಟ್ವಾಳ (ಕರಾವಳಿ ಟೈಮ್ಸ್) : ಕೋವೀಡ್-19 ನಿಯಂತ್ರಣಕ್ಕಾಗಿ ದೇಶಾದ್ಯಾಂತ ಹೇರಲ್ಪಟ್ಟ ಲಾಕ್‍ಡೌನ್ ಸಂದರ್ಭ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಲ್ಲಮಜಲು ವಾರ್ಡ್ ಸಂಖ್ಯೆ 21 ಹಾಗೂ 22 ರ ಮನೆಗಳಿಗೆ ಶುಕ್ರವಾರ ಮಾಜಿ ಸಚಿವ ಬಿ ರಮಾನಾಥ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಪಿ ರಾಮಕೃಷ್ಣ ಆಳ್ವ ಅವರುಗಳ ನೇತ್ರತ್ವದಲ್ಲಿ ರೇಶನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಪಲ್ಲಮಜಲು ಬೂತ್ ಅಧ್ಯಕ್ಷ ಆನಂದ ಕುಲಾಲ್, ಮಾಜಿ ಬೂತ್ ಅಧ್ಯಕ್ಷ ರಫೀಕ್ ಪಲ್ಲಮಜಲು, ಪ್ರಮುಖರಾದ ಇಬ್ರಾಹಿಂ ಪಲ್ಲಮಜಲು, ಇಸಾಕ್ ಪಲ್ಲಮಜಲು, ಸತ್ತಾರ್ ಕಲ್ಲಗುಡ್ಡೆ, ದಿನೇಶ್ ಕುಲಾಲ್ ಮಿತ್ತಪರಾರಿ, ಬಶೀರ್ ಪಲ್ಲಮಜಲು, ನಾಗರಾಜ ಕಲ್ಲಗುಡ್ಡೆ, ರವೀಶ್ ಶೆಟ್ಟಿ, ಸದಾನಂದ ಕಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment