ನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್‍ನಿಂದಾಗಿ ದೇಶದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ತಮ್ಮ ಬಳಿ ಅಂಕಿ ಅಂಶ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿದ ಮಾಹಿತಿಗೆ ಪ್ರತಿಕ್ರಯಿಸಿದೆ.
ದೇಶದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟಿದೆ ಎಂದು ವೆಂಕಟೇಶ್ ನಾಯಕ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗಿದ್ದ ಪ್ರಶ್ನೆಗೆ ಕಾರ್ಮಿಕ ಇಲಾಖೆ ಮುಖ್ಯ ಆಯುಕ್ತ ಕಚೇರಿ ಈ ರೀತಿ ಉತ್ತರಿಸಿದೆ.
ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಎಷ್ಟು ಮಂದಿ ವಲಸೆ ಕಾರ್ಮಿಕರು ಅಲ್ಲಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಮೂರು ದಿನಗಳೊಳಗೆ ಅಂಕಿಅಂಶ ಸಂಗ್ರಹಿಸಿ ಕೊಡಿ ಎಂದು ಕಾರ್ಮಿಕ ಸಚಿವಾಲಯ ತನ್ನ ಸ್ಥಳೀಯ ಕಚೇರಿಗಳಿಗೆ ಆದೇಶ ಹೊರಡಿಸಿದ ನಂತರ ಕಾಮನ್ ವೆಲ್ತ್ ಹ್ಯೂಮನ್ ರೈಟ್ಸ್ ಸಂಸ್ಥೆ ಅಂಕಿಅಂಶ ಕೇಳಿದೆ.
ಲಾಕ್‍ಡೌನ್‍ನಿಂದಾಗಿ ದೇಶದಲ್ಲಿ ವಲಸೆ ಕಾರ್ಮಿಕರಿಗೆ ಬಹುದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಬಹುತೇಕ ಮಂದಿ ಸಿಕ್ಕಿಹಾಕಿಕೊಂಡಿದ್ದು, ಹಲವರು ನಿರಾಶ್ರಿತ ತಾಣಗಳಲ್ಲಿ, ಮನೆ ಮಾಲೀಕರ ಕೆಲಸ ಸ್ಥಳದಲ್ಲಿ, ಕೆಲವು ಕ್ಲಸ್ಟರ್‍ಗಳಲ್ಲಿ ಇದ್ದಾರೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆಯೇ ಹೊರತು ಅವರ ನಿಖರ ಸಂಖ್ಯೆ ತಿಳಿದುಬಂದಿಲ್ಲ ಎಂದಿದೆ.
ಕಾರ್ಮಿಕ ಸಚಿವಾಲಯದ ಅಧಿಕೃತ ಘೋಷಣೆ ಹೊರಬೀಳಲು ಸುಮಾರು 2 ವಾರಗಳ ತನಕ ಕಾದ ನಂತರ ನಾಯಕ್ ಆರ್‍ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
0 comments:
Post a Comment