ಮಂಗಳೂರು (ಕರಾವಳಿ ಟೈಮ್ಸ್) : ಸೌದಿ ಅರೇಬಿಯಾದಿಂದ ಮಂಗಳೂರಿಗೆ ಯಾವುದೇ ವಿಮಾನ ಆಗಮನ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮೇ 20 ರಂದು ಮಸ್ಕತ್ ಹಾಗೂ 22 ರಂದು ಕತಾರ್‍ನಿಂದ ಮಂಗಳೂರಿಗೆ ವಿಮಾನ ಆಗಮಿಸಲಿದೆ. ದುಬೈಯಿಂದ ಈಗಾಗಲೇ ಎರಡು ವಿಮಾನಗಳು ಆಗಮಿಸಿದೆ. ಸೌದಿ ಅರೇಬಿಯಾದಿಂದ ಮಂಗಳೂರಿಗೆ ವಿಮಾನ ಆಗಮನದ ಬಗ್ಗೆ ಇನ್ನೂ ಯಾವುದೇ ದಿನ ನಿಗದಿಯಾಗಿಲ್ಲ ಎಂದರು.
ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೊಳಗಾಗಿರುವ ಗಲ್ಫ್ ಕನ್ನಡಿಗರನ್ನು ಶೀಘ್ರ ತವರಿಗೆ ಕರೆ ತರಲು ಕೇಂದ್ರ ಸರಕಾರ ಇನ್ನಷ್ಟು ವೇಗವಾಗಿ ಕಾರ್ಯಪ್ರವೃತ್ತವಾಗಬೇಕು ಎಂದು ಪ್ರವಾಸಿಗಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.
0 comments:
Post a Comment