ಹೊರ ರಾಜ್ಯದಿಂದ ಬರುವವರಿಗೆ ಕರ್ನಾಟಕ ಸರಕಾರದಿಂದ ಹೊಸ ಮಾರ್ಗ ಸೂಚಿ ಬಿಡುಗಡೆ - Karavali Times ಹೊರ ರಾಜ್ಯದಿಂದ ಬರುವವರಿಗೆ ಕರ್ನಾಟಕ ಸರಕಾರದಿಂದ ಹೊಸ ಮಾರ್ಗ ಸೂಚಿ ಬಿಡುಗಡೆ - Karavali Times

728x90

31 May 2020

ಹೊರ ರಾಜ್ಯದಿಂದ ಬರುವವರಿಗೆ ಕರ್ನಾಟಕ ಸರಕಾರದಿಂದ ಹೊಸ ಮಾರ್ಗ ಸೂಚಿ ಬಿಡುಗಡೆ



ಬೆಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್ 5.Oನಲ್ಲಿ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶವನ್ನು ನೀಡಿದೆ. ಒಂದು ವೇಳೆ ಅಗತ್ಯವಿದ್ದಲ್ಲಿ ರಾಜ್ಯಗಳು ಅಂತಾರಾಜ್ಯ ಪ್ರಯಾಣಿಕರ ಮೇಲೆ ನಿರ್ಬಂಧ ಹೇರುವ ಅವಕಾಶವನ್ನು ಕೇಂದ್ರ ನೀಡಿತ್ತು. ಇದೀಗ ಕರ್ನಾಟಕ ಸರಕಾರ ಹೊರ ರಾಜ್ಯದಿಂದ ಬರೋರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಹೊರಡಿಸಿದೆ.

1. ಸೇವಾ ಸಿಂಧುವಿನಲ್ಲಿ ನೋಂದಣಿ:

* ಕರ್ನಾಟಕ ಪ್ರವೆಶಿಸುವ ಮುನ್ನ ಪ್ರಯಾಣಿಯಕರು ಸೇವಾ ಸಿಂಧು ಪೋಟರ್ಲ್ ನಲ್ಲಿ ತಮ್ಮ ಪ್ರಾಥಮಿಕ ಮಾಹಿತಿಯನ್ನು ದಾಖಲಿಸಿರಬೇಕು. ಈ ಹಿಂದೆ ಇದ್ದಂತೆ ಸೇವಾ ಸಿಂಧೂವಿನಡಿ ನೋಂದಣಿ ಇ-ಪಾಸ್ ಪಡೆಯುವ ಅಗತ್ಯವಿಲ್ಲ.

* ಬ್ಯುಸಿನೆಸ್ ಟ್ರಿಪ್ ಆಗಿದ್ದರೆ ವೈಯಕ್ತಿಯ ಮಾಹಿತಿ ಜೊತೆಗೆ ರಾಜ್ಯದಲ್ಲಿ ಭೇಟಿ ಮಾಡುತ್ತಿರುವವರ ಮಾಹಿತಿಯನ್ನು ಒದಗಿಸಬೇಕು.

* ದೀರ್ಘ ಪ್ರಯಾಣ ಮಾಡುತ್ತಿರುವವರು ರಾಜ್ಯ ಪ್ರವೇಶಿಸುವಾಗ ಮಾಹಿತಿ ನೀಡಬೇಕು.

2. ಗಡಿ ಚೆಕ್‍ಪೋಸ್, ಬಸ್ ನಿಲ್ದಾಣ, ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್. ನಿಯಮಗಳಿಗುನುವಾಗಿ ಕೈ ಮೇಲೆ ಸೀಲ್, 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸೋದು.

3. ಕ್ವಾರಂಟೈನ್ ನಿಯಮಗಳು:

ಎ. ಮಹಾರಾಷ್ಟ್ರದಿಂದ ಬರೋರಿಗೆ ಪ್ರತ್ಯೇಕ ನಿಯಮಗಳು
ಮೊದಲ ಏಳು ದಿನ ಸಾಂಸ್ಥಿಕ ಕ್ವಾರಂಟೈನ್. ನಂತ್ರ ಏಳು ದಿನ ಹೋಮ್ ಕ್ವಾರಂಟೈನ್. ಬಂದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡರೆ ನಿಗದಿತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು. ರಿಪೋರ್ಟ್ ನೆಗೆಟಿವ್ ಬಂದ್ರೆ ಯಾವುದೇ ಪರೀಕ್ಷೆಯ ಅವಶ್ಯಕತೆ ಇಲ್ಲ.

* ಮಹಾರಾಷ್ಟ್ರದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಬಳಿಕ, ಏಳು ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ. ಇನ್ನು ತುರ್ತು ಪ್ರಯಾಣದ ಹಿನ್ನೆಲೆ ಆಗಮಿಸಿದವರನ್ನು ಒಬ್ಬರ ನಿಗಾದಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ. (ಕುಟುಂಬದಲ್ಲಿ ಸಾವು, ಗರ್ಭಿಣಿ, 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು, ವೈದ್ಯಕೀಯ ಚಿಕಿತ್ಸೆ)

ವ್ಯವಹಾರದ ಹಿನ್ನೆಲೆ ಮಹಾರಾಷ್ಟ್ರದಿಂದ ಆಗಮಿಸುವ ವ್ಯಕ್ತಿ ಕಡ್ಡಾಯವಾಗಿ ಏಳು ದಿನಗಳೊಗೆ ಹಿಂದಿರುಗುವ ಟಿಕೆಟ್ ಕಾಯ್ದಿರಿಸಿಕೊಂಡಿರಬೇಕು. ಕರ್ನಾಟಕದಲ್ಲಿ ಭೇಟಿಯಾಗುವ ವ್ಯಕ್ತಿಯ ವಿಳಾಸ ನೀಡಬೇಕು. ಎರಡು ದಿನಗಳ ಮುಂಚಿನ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿದ್ದರೆ ಕ್ವಾರಂಟೈನ್ ನಿಂದ ವಿನಾಯ್ತಿ. ಕೋವಿಡ್ ರಿಪೋರ್ಟ್ ಇಲ್ಲದೇ ಬಂದವರಿಗೆ ಎರಡು ದಿನ ಕ್ವಾರಂಟೈನ್ ಮಾಡಿ ಕಡ್ಡಾಯವಾಗಿ ಅವರ ಖರ್ಚಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ವ್ಯವಹಾರ ಸಂಬಂಧ ಬಂದವರಿಗೆ ಕೈ ಮೇಲೆ ಹಾಕುವ ಸೀಲ್ ನಿಂದ ವಿನಾಯ್ತಿ.

ಮಹಾರಾಷ್ಟ್ರದಿಂದ ಬರೋ ಪ್ರಯಾಣಿಕರು ಎರಡು ದಿನದ ಮೊದಲಿನ ಐಸಿಎಂಆರ್ ನಿಂದ ಅನುಮತಿ ಪಡೆದ ಲ್ಯಾಬ್ ಗಳಿಂದಲೇ ಕೋವಿಡ್-19 ನೆಗೆಟಿವ್ ರಿಪೋರ್ಟ್ ತಂದವರಿಗೆ ಕ್ವಾರಂಟೈನ್ ನಿಂದ ವಿನಾಯ್ತಿ.

* ಇತರೆ ರಾಜ್ಯಗಳ ಪ್ರಯಾಣಿಕರಿಗೆ
ಬೇರೆ ರಾಜ್ಯಗಳಿಂದ ಬರೋ ಪ್ರಯಾಣಿಕರಿಗೆ ಕಡ್ಡಾಯ 14 ದಿನ ಹೋಮ್ ಕ್ವಾರಂಟೈನ್. ಈ ವೇಳೆ ಸೋಂಕಿನ ಲಕ್ಷಣಗಳು ಕಂಡು ಬಂದರೆ ಐಸೋಲೇಷನ್ ಗೆ ಶಿಫ್ಟ್ ಮಾಡಲಾಗುವುದು. ಕುಟುಂಬದಲ್ಲಿ ಹೆಚ್ಚಿನ ಸದಸ್ಯರು ಅಥವಾ ಮನೆ ಚಿಕ್ಕದಾಗಿದ್ದರೆ ಅಥವಾ ಸ್ಲಂ ಪ್ರದೇಶಗಳಾಗಿದ್ದರೆ ಹೋಮ್ ಕ್ವಾರಂಟೈನ್ ಗೆ ಅನುಮತಿ ನೀಡಲಾಗುವುದಿಲ್ಲ.

ಮಹಾರಾಷ್ಟ್ರದಿಂದ ಬರೋ ಪ್ರಯಾಣಿಕರು ಎರಡು ದಿನದ ಮೊದಲಿನ ಐಸಿಎಂಆರ್ ನಿಂದ ಅನುಮತಿ ಪಡೆದ ಲ್ಯಾಬ್ ಗಳಿಂದಲೇ ಕೋವಿಡ್-19 ನೆಗೆಟಿವ್ ರಿಪೋರ್ಟ್ ತಂದವರಿಗೆ ಕ್ವಾರಂಟೈನ್ ನಿಂದ ವಿನಾಯ್ತಿ.

ಬಿಬಿಎಂಪಿ ಮತ್ತು ಇನ್ನಿತರ ನಗರ ಪ್ರದೇಶಗಳಲ್ಲಿ

* ಮನೆಯ ಬಾಗಿಲಿಗೆ ಹೋಮ್ ಕ್ವಾರಂಟೈನ್ ಪೋಸ್ಟರ್ ಅಂಟಿಸಲಾಗುವುದು.

* ಹೋಮ್ ಕ್ವಾರಂಟೈನ್ ಮನೆಯ ನೆರೆಯ ಇಬ್ಬರಿಗೆ/ ಅಪಾರ್ಟ್ ಮೆಂಟ್ ಸಿಬ್ಬಂದಿ / ಮನೆಯ ಮಾಲೀಕರಿಗೆ ಮಾಹಿತಿ ನೀಡುವುದು.

* ವಾರ್ಡ್ ಮಟ್ಟದ ಅಧಿಕಾರಿಗಳಿಂದ ಪರಿಶೀಲನೆ.

* ಬೂತ್ ಮಟ್ಟದಲ್ಲಿ ಕ್ವಾರಂಟೈನ್ ಮೇಲೆ ನಿಗಾ ಇರಿಸಲು ಮೂವರನ್ನು ನೇಮಿಸುವುದು.

* ಒಂದು ವೇಳೆ ಕ್ವಾರಂಟೈನ್ ನಿಯಮ ಉಲ್ಲಂಘಿಸದಲ್ಲಿ ಎಫ್‍ಐಆರ್ ದಾಖಲು.

* ಕ್ವಾರಂಟೈನ್ ವಾಚ್ ಆ್ಯಪ್ ಬಳಕೆ.
  • Blogger Comments
  • Facebook Comments

0 comments:

Post a Comment

Item Reviewed: ಹೊರ ರಾಜ್ಯದಿಂದ ಬರುವವರಿಗೆ ಕರ್ನಾಟಕ ಸರಕಾರದಿಂದ ಹೊಸ ಮಾರ್ಗ ಸೂಚಿ ಬಿಡುಗಡೆ Rating: 5 Reviewed By: karavali Times
Scroll to Top