ಬೆಳ್ತಂಗಡಿ (ಕರಾವಳಿ ಟೈಮ್ಸ್) : ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ಅಬೂಬಕರ್ ಸಿದ್ದೀಕ್ ಜುಮಾ ಮಸೀದಿ ಆಡಳಿತ ಸಮಿತಿ ನೇತೃತ್ವದಲ್ಲಿ, ಊರಿನ ಸುನ್ನೀ ಸಂಘಟನೆಗಳು, ಜಮಾಅತರು ಹಾಗೂ ಕೆಲವು ದಾನಿಗಳ ಸಹಕಾರದಿಂದ, ಕೊರೊನೋ ವೈರಸ್ ಕಾರಣ ಲಾಕ್‍ಡೌನ್ ಆಗಿರುವುದರಿಂದ ಸಂಕಷ್ಟಕ್ಕೊಳಗಾಗಿರುವ ಜಮಾಅತ್ ಹಾಗೂ ಊರಿನ ಎಂಬತ್ತಕ್ಕೂ ಅಧಿಕ ಮನೆಗಳಿಗೆ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಅಗತ್ಯ ಆಹಾರ ಸಾಮಾಗ್ರಿಗಳನ್ನೊಳಗೊಂಡ ರಮಳಾನ್ ಕಿಟ್ ವಿತರಿಸಲಾಯಿತು.
ಜಮಾಅತ್ ಆಡಳಿತ ಸಮಿತಿ ನಾಯಕರ ನೇತೃತ್ವದಲ್ಲಿ ನಡೆದ ಕಿಟ್ ವಿತರಣಾ ವ್ಯವಸ್ಥೆಗಾಗಿ, ಊರಿನ ಸುನ್ನೀ ಸಂಘಟನೆಗಳಾದ ಎಸ್.ವೈ.ಎಸ್, ಎಸ್ಸೆಸ್ಸೆಫ್, ಎ.ವೈ.ಎಫ್, ಮಲ್ಜಅ ಸಮಿತಿ ನಾಯಕರು ಹಾಗೂ ಜಮಾಅತರು ಕೈ ಜೋಡಿಸಿದರು.
0 comments:
Post a Comment