ಬೆಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್ 4 ರಲ್ಲೂ ಅಂತರ್ ಜಿಲ್ಲೆಗಳ ಮಧ್ಯೆ ಖಾಸಗಿ ವಾಹನಗಳಲ್ಲಿ ಸಂಚರಿಸಲು ಪಾಸ್ ಕಡ್ಡಾಯವಾಗಿದೆ. ಆದರೆ ಬಸ್ಸಿನಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ.
ಲಾಕ್‍ಡೌನ್ 3 ಜಾರಿಯಲ್ಲಿದ್ದ ವೇಳೆ ಇದ್ದ ಷರತ್ತುಗಳೆಲ್ಲವೂ ಲಾಕ್‍ಡೌನ್ 4ರಲ್ಲೂ ಅನ್ವಯವಾಗುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ಸೇವಾ ಸಿಂಧು ವೆಬ್‍ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದು ತೆರಳಬೇಕಾಗುತ್ತದೆ.
ಸರಕಾರಿ ನೌಕರರು, ಸಿಬ್ಬಂದಿಗೆ, ಕಂಪೆನಿಗಳ ಉದ್ಯೋಗಿಗಳಿಗೆ ಅಂತರ ಜಿಲ್ಲಾ ಪಾಸ್ ಅಗತ್ಯವಿಲ್ಲ. ಈ ವ್ಯಕ್ತಿಗಳು ಪೆÇಲೀಸರಿಗೆ ಐಡಿ ಕಾರ್ಡ್ ತೋರಿಸಿದರೆ ಅನುಮತಿ ನೀಡಲಾಗುತ್ತದೆ. ಖಾಸಗಿ ವಾಹನದಲ್ಲಿ ಹೋಗುವವರಿಗೆ ಮಾತ್ರ ಪಾಸ್ ಕಡ್ಡಾಯ ಮಾಡಲಾಗಿದೆ. ಟ್ಯಾಕ್ಸಿಯಲ್ಲಿ ಚಾಲಕರೊಂದಿಗೆ ಇಬ್ಬರು, ಮ್ಯಾಕ್ಸಿ ಕ್ಯಾಬ್‍ನಲ್ಲಿ ಮೂರು ಜನ ಮತ್ತು ಚಾಲಕರು ಪ್ರಯಾಣಿಸಲು ಅನುಮತಿ ನೀಡಲಾಗಿದೆ.
0 comments:
Post a Comment