ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ |
ಮಂಗಳೂರು (ಕರಾವಳಿ ಟೈಮ್ಸ್) : ದುಬೈಯಿಂದ ನಿನ್ನೆ ರಾತ್ರಿ ಮಂಗಳೂರಿಗೆ ವಿಮಾನ ಮೂಲಕ ಬಂದ ಯಾತ್ರಿಕರೊಂದಿಗೆ ಸಂಬಂದಪಟ್ಟ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿರುವ ಬಗ್ಗೆ ಯಾತ್ರಿಕರು ಸುದ್ದಿ ವಾಹಿನಿಗಳಿಗೆ ದೂರಿಕೊಳ್ಳುವಂತಾಗಿದ್ದು ತೀರಾ ಖಂಡನೀಯ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಲೀಗ್ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಯಿಸಿರುವ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ಕೊರೋನಾ ಕಾರಣದಿಂದ ಗಲ್ಫ್ ರಾಷ್ಟ್ರಗಳಲ್ಲಿ ಉಳಿದಿರುವ ಭಾರತೀಯರನ್ನು ಕರೆ ತರುವ ಕಾರ್ಯಕ್ಕೆ ಮುಂದಾಗಿರುವ ಸರಕಾರದ ಕ್ರಮ ಶ್ಲಾಘನೀಯ, ಆದರೆ ಅವರನ್ನು ಕರೆ ತಂದಾಗ ವಿಮಾನ ನಿಲ್ದಾಣದಲ್ಲಿ ಅವರೊಂದಿಗೆ ಸಿಬ್ಬಂದಿಗಳು ವರ್ತಿಸಿದ ರೀತಿ ಅಕ್ಷಮ್ಯ ಎಂದವರು ಖಂಡಿಸಿದ್ದಾರೆ.
ಗರ್ಭಿಣಿರಿಗೆ ಒಂದು ಗ್ಲಾಸು ನೀರು ಕೂಡಾ ಸಿಗದೇ ಐದಾರು ಗಂಟೆ ಪರದಾಡಬೇಕಾಗಿ ಬಂದದ್ದು ಇದು ಜಿಲ್ಲಾಡಳಿತದ ಬೇಜವಾಬ್ದಾರಿ ವರ್ತನೆಯನ್ನು ಸೂಚಿಸುತ್ತದೆ. ಸರಿಯಾದ ರೀತಿಯಲ್ಲಿ ಪೂರ್ವ ತಯಾರಿ ವ್ಯವಸ್ಥೆ ಕೈಗೊಂಡಿರಲಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ. ಈ ಅಮಾನವೀಯ ಘಟನೆಯನ್ನು ಇಂಡಿಯನ್ ಯೂ£ಯನ್ ಮುಸ್ಲಿಂ ಲೀಗ್ ತೀವ್ರವಾಗಿ ಖಂಡಿಸುತ್ತದೆ. ಮತ್ತು ತಪ್ಪಿತಸ್ಥರೆಂದು ಕಂಡು ಬರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಬೂಕ್ ದಾರಿಮಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಮಂಜನಾಡಿ ಮತ್ತು ಮಾಣಿಯಲ್ಲಿ ಕ್ವಾರಂಟೈನ್ ವ್ಯವಸ್ಥೆಯನ್ನು ಮಾಡುವುದಾಗಿ ನಂಬಿಸಿ ಆ ಸಂಸ್ಥೆಯ ಸಿಬ್ಬಂದಿಗಳ ಹಗಲು ರಾತ್ರಿ ದುಡಿದು ಸಿದ್ದಪಡಿಸಿಟ್ಟ ಕಟ್ಟಡಗಳಿಗೆ ಯಾತ್ರಿಕರನ್ನು ಕೊಂಡೊಯ್ಯದೇ ದುಬಾರಿ ಬೆಲೆಯ ಹೋಟೇಲುಗಳಲ್ಲಿ ಒತ್ತಾಯ ಪೂರ್ವಕ ತಂಗಿಸಿದ್ದು ಒಪ್ಪತಕ್ಕದ್ದಲ್ಲ ಎಂದು ಮುಸ್ಲಿಂ ಲೀಗ್ ಅಭಿಪ್ರಾಯ ಪಟ್ಟಿದೆ.
0 comments:
Post a Comment