ಬೆಂಗಳೂರು (ಕರಾವಳಿ ಟೈಮ್ಸ್) : ವಿಭಿನ್ನ ಶೈಲಿಯ ಹೇರ್ ಸ್ಟೈಲ್ ಹಾಗೂ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದ ಕನ್ನಡದ ಹಿರಿಯ ಹಾಸ್ಯ ನಟ ಮೈಕಲ್ ಮಧು ಅವರು ಬುಧವಾರ ಸಂಜೆ ನಿಧನರಾಗಿದ್ದಾರೆ.
ಸಂಜೆ ಸುಮಾರು 6.30ರ ಸಮಯದಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮೈಕಲ್ ಮಧು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಎರಡು ದಿನದ ಹಿಂದೆಯಷ್ಟೇ ಮಂಡ್ಯದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದರು.
ಉಶ್, ಭಜರಂಗಿ, ಎಕೆ47, ವಾಲಿ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಮೈಕಲ್ ಮಧು ಗುರುತಿಸಿಕೊಂಡಿದ್ದರು.
0 comments:
Post a Comment