ನವದೆಹಲಿ (ಕರಾವಳಿ ಟೈಮ್ಸ್) : ಕೋವಿಡ್ ಲಾಕ್‍ಡೌನನ್ನು ಕೇಂದ್ರ ಸರಕಾರ 5ನೇ ಬಾರಿಗೆ ವಿಸ್ತರಿಸಿ ಮಾರ್ಗಸೂಚಿ ಹೊರಡಿಸಿದೆ. ಜೂನ್ 30ರವರೆಗೆ ಪರಿಷ್ಕøತ ಮಾರ್ಗಸೂಚಿಯಂತೆ ಲಾಕ್‍ಡೌನ್ ಮುಂದುವರಿಯಲಿದೆ. ಲಾಕ್‍ಡೌನ್ 5.0 ಕಂಟೈನ್‍ಮೆಂಟ್ ಝೋನ್‍ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಇತರ ಪ್ರದೇಶಗಳಿಗೆ ಮತ್ತಷ್ಟು ವಿನಾಯಿತಿಗಳನ್ನು ಘೋಷಿಸಲಾಗಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೊದಲನೇ ಹಂತದಲ್ಲಿ ಧಾರ್ಮಿಕ ಕೇಂದ್ರಗಳು, ಮಾಲ್‍ಗಳು, ಹೋಟೆಲ್‍ಗಳನ್ನು ಆರಂಭಿಸಲು ಜೂನ್ 8 ರಿಂದ ಅನುಮತಿ ನೀಡಬಹುದಾಗಿದೆ ಎಂದು ಸೂಚಿಸಿದೆ.
ಎರಡನೇ ಹಂತದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚಿಸಿದ ನಂತರ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಮೂರನೇ ಹಂತದಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರ, ಮೆಟ್ರೋ ರೈಲಿನ ಕಾರ್ಯಾಚರಣೆ, ಸಿನಿಮಾ ಹಾಲ್‍ಗಳು, ಜಿಮ್, ಈಜುಕೊಳಗಳು, ಇತರೆ ಮನರಂಜನಾ ಸ್ಥಳಗಳನ್ನು ತೆರೆಯುವ ದಿನಾಂಕದ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದೆ.
0 comments:
Post a Comment