ಕುರಿಯಾಳ : ಲಾಕ್‍ಡೌನ್ ಬಿಡುವಿನ ವೇಳೆ ಬಾವಿ ತೋಡಿದ ಯುವಕರು - Karavali Times ಕುರಿಯಾಳ : ಲಾಕ್‍ಡೌನ್ ಬಿಡುವಿನ ವೇಳೆ ಬಾವಿ ತೋಡಿದ ಯುವಕರು - Karavali Times

728x90

18 May 2020

ಕುರಿಯಾಳ : ಲಾಕ್‍ಡೌನ್ ಬಿಡುವಿನ ವೇಳೆ ಬಾವಿ ತೋಡಿದ ಯುವಕರು



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕುರಿಯಾಳ ಗ್ರಾಮದ ಯುವಕರು ಲಾಕ್‍ಡೌನ್ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯ ಭಜನಾ ಮಂದಿರದ ಬಳಿ ಬಾವಿ ನಿರ್ಮಾಣ ಮಾಡುವ ಕೆಲಸ ಕೈಗೊಂಡಿದ್ದಾರೆ.

ಇಲ್ಲಿನ ದುರ್ಗಾನಗರ ಶ್ರೀ ಓಂಕಾರೇಶ್ವರೀ ಭಜನಾ ಮಂದಿರ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಮಂದಿರದ ಅವಶ್ಯಕತೆಗಾಗಿ ಯುವಕರು ಈ ಬಾವಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಓಂಕಾರೇಶ್ವರೀ ಭಜನಾ ಮಂದರಕ್ಕೆ ಬಾವಿಯ ಅಗತ್ಯತೆಯನ್ನು ಮನಗಂಡು ಸ್ಥಳೀಯ ಉತ್ಸಾಹಿ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ  ಶ್ರಮದಾನದ ಮೂಲಕ ಬಾವಿ ತೋಡಲು ತೀರ್ಮಾನಿಸಿದ್ದರು. ಎಪ್ರಿಲ್ 27 ರಂದು 25 ಮಂದಿ ಯುವಕರ ತಂಡ ಬಾವಿ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಒಂದು ವಾರಗಳ ಕಾಲ ನಿರಂತರ ಬಾವಿ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯ ಮನೆಯವರು ಬೆಳಿಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ನೀಡಿ ಸಹಕರಿಸಿದ್ದರು. ಯುವಕರ ಪ್ರಯತ್ನದ ಫಲವಾಗಿ ಬಾವಿಯಲ್ಲಿ ನೀರು ದೊರಕಿದ್ದು ಲಾಕ್‍ಡೌನ್ ಸಮಯವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಂಡ ಯುವಕರ ಕಾರ್ಯ ಸ್ಥಳೀಯವಾಗಿ ಶ್ಲಾಘನೆಗೆ ಪಾತ್ರವಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕುರಿಯಾಳ : ಲಾಕ್‍ಡೌನ್ ಬಿಡುವಿನ ವೇಳೆ ಬಾವಿ ತೋಡಿದ ಯುವಕರು Rating: 5 Reviewed By: karavali Times
Scroll to Top