ಬೆಳ್ತಂಗಡಿ (ಕರಾವಳಿ ಟೈಮ್ಸ್) : ಮಹಾಮಾರಿ ಕೊರೊನೋ ವೈರಸ್ ಕಾರಣ ಲಾಕ್ ಡೌನ್ ಆಗಿರುವುದರಿಂದ, ನಿರಂತರ ಸೇವೆ ಇಲ್ಲದೆ, ಕುಟುಂಬ ನಿರ್ವಹಣೆಗೆ ಅಸಾಧ್ಯವಾಗಿ ಸಂಕಷ್ಟದಲ್ಲಿರುವ ಸಖಾಫಿ ವಿದ್ವಾಂಸರಿಗೆ, ಸಖಾಫಿ ವಿದ್ವಾಂಸರ ಒಕ್ಕೂಟವಾದ ರಾಜ್ಯ ಸಖಾಫಿ ಕೌನ್ಸಿಲ್ ನೇತೃತ್ವದಲ್ಲಿ, ದ.ಕ ಜಿಲ್ಲಾ ಸಮಿತಿ ಸಹಕಾರದೊಂದಿಗೆ, ತಾಲೂಕಿನ ಹಲವು ಸಖಾಫಿ ದಾನಿಗಳ ನೆರವಿನಿಂದ, ಬೆಳ್ತಂಗಡಿ ತಾಲೂಕಿನ 30 ರಷ್ಟು ಸಖಾಫಿ ವಿದ್ವಾಂಸರಿಗೆ 35 ಸಾವಿರದಷ್ಟು ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ಇತ್ತೀಚೆಗೆ ವಿತರಿಸಲಾಯಿತು.
ಪ್ರತ್ಯೇಕವಾಗಿ ಪವಿತ್ರ ರಮಳಾನ್ ತಿಂಗಳನ್ನು ಪರಿಗಣಿಸಿ, ರಾಜ್ಯದಲ್ಲಿರುವ ಸಾವಿರಕ್ಕೂ ಅಧಿಕ ಸಖಾಫಿ ವಿದ್ವಾಂಸರ ಜೀವನೋಪಾಯ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು, ಪ್ರತೀ ತಾಲೂಕು ಮಟ್ಟದಲ್ಲಿರುವ, ತಾಲೂಕು ಸಖಾಫಿ ಕೌನ್ಸಿಲ್ ಸಮಿತಿ ನೇತೃತ್ವದಲ್ಲಿ ಅತ್ಯಾವಶ್ಯಕ ಆಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ.
ರಾಜ್ಯ ಹಾಗೂ ಜಿಲ್ಲಾ ಸಮಿತಿ ಅಧೀನದ ಸಾಂತ್ವನ ಸಮಿತಿ ನಾಯಕತ್ವದಲ್ಲಿ, ತಾಲೂಕು ಸಮಿತಿ ಈ ಕಾರ್ಯಾಚರಣೆ ನಡೆಸುತ್ತಿದೆ.
ಪ್ರಥಮ ಹಂತದ ವಿತರಣೆಗೆ, ಆರ್ಥಿಕವಾಗಿ ಸಖಾಫಿ ಕೌನ್ಸಿಲ್ ಜಿಲ್ಲಾ ಸಮಿತಿ, ಮತ್ತು ಅಬ್ದುಲ್ ಖಾದರ್ ಸಖಾಫಿ ಚಾರ್ಮಾಡಿ (ನ್ಯೂಜಿಲೆಂಡ್), ಸಮಿತಿ ಅಧ್ಯಕ್ಷ ಅಬೂಸ್ವಾಲಿಹ್ ಸಖಾಫಿ ಬಟ್ಲಡ್ಕ, ಅಬ್ದುರ್ರಝಾಕ್ ಸಖಾಫಿ ಕುಪ್ಪೆಟ್ಟಿ, ಹಬೀಬ್ ಸಖಾಫಿ, ಅಬ್ದುರ್ರಝಾಕ್ ಸಖಾಫಿ ಸರಳೀಕಟ್ಟೆ, ಯೂಸುಫ್ ಸಖಾಫಿ ಸಹಕರಿಸಿದರು.
ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಕೋಶಾಧಿಕಾರಿ ತಸ್ಲೀಂ ಸಖಾಫಿ, ಅಬ್ದುಲ್ಲತೀಫ್ ಸಖಾಫಿ ತುರ್ಕಳಿಕೆ, ಮುಸ್ತಫಾ ಸಖಾಫಿ, ಅಬ್ದುರ್ರಝಾಕ್ ಸಖಾಫಿ ಮೊದಲಾದವರು ನೇತೃತ್ವ ನೀಡಿದರು.
0 comments:
Post a Comment