ಕರಾಚಿ (ಕರಾವಳಿ ಟೈಮ್ಸ್) : ಸುಮಾರು 100ಕ್ಕೂ ಅಧಿಕ ಪ್ರಯಾಣಿಕರಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್‍ಲೈನ್ಸ್ ಕರಾಚಿ ವಿಮಾನ ನಿಲ್ದಾಣದ ಬಳಿ ವಸತಿ ಪ್ರದೇಶದಲ್ಲಿ ಪತನಗೊಂಡಿದೆ.
ಈ ವಿಮಾನ ಲಾಹೋರ್‍ನಿಂದ ಕರಾಚಿಗೆ ಹೊರಟಿತ್ತು. ಕರಾಚಿ ಬಳಿ ಬರುತ್ತಿದ್ದಂತೆ ವಿಮಾನ ಪತನಗೊಂಡಿದ್ದು, ದಟ್ಟ ಹೊಗೆ ಆವರಿಸಿದೆ. ವಿಮಾನದಲ್ಲಿ ನೂರಕ್ಕೂ ಅಧಿಕ ಜನರಿದ್ದರು ಎನ್ನಲಾಗಿದೆ. ಕರಾಚಿ ವಿಮಾನ ನಿಲ್ದಾಣ ಸಮೀಪದ ಮಾಡಲ್ ಟೌನ್ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ. ಕರಾಚಿಯ ರನ್ ವೇಯಲ್ಲಿ ಲ್ಯಾಂಡ್ ಆಗುವ ಒಂದು ನಿಮಿಷ ಮೊದಲು ವಿಮಾನ ಪತನವಾಗಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಕಾರ, ಲಾಹೋರ್‍ನಿಂದ ಹೊರಟಿದ್ದ ಪಿಕೆ-303 ಕರಾಚಿಯಲ್ಲಿ ಲ್ಯಾಂಡ್ ಆಗುವ ಮೊದಲೇ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದೆ.
ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಧೆಗೆ ಸೇರಿದ ಎ320 ವಿಮಾನ ಮನೆಗಳ ಮೇಲೆ ಬಿದ್ದಿರುವುದರಿಂದ 8 ರಿಂದ 10 ಮನೆಗಳು ಜಖಂಗೊಂಡಿದೆ ಎನ್ನಲಾಗಿದೆ.
0 comments:
Post a Comment