ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಡೇಶಿವಾಲಯದ ಯುವಶಕ್ತಿಯ ನಿರೀಕ್ಷಿತ ಸೇವಾಯೋಜನೆಯಂತೆ ಕರೋನಾ ವಾರಿಯರ್ಸ್‍ಗಳನ್ನು ಗುರುತಿಸುವ ಕಾರ್ಯಕ್ರಮದ ಭಾಗವಾಗಿ ಯಾರೂ ಗುರುತಿಸದ ಕೊರೋನಾ ಪೀಡಿತರನ್ನು ಸಾಗಿಸುವ ಆಂಬ್ಯುಲೆನ್ಸ್ ಚಾಲಕರ ಸೇವೆಯನ್ನು ಮನ್ನಿಸಿ ಟೀಂ ವೈ.ಎಸ್.ಕೆ. ಆಶ್ರಯದಲ್ಲಿ ಸ್ಥಳೀಯ ಸಂಘಟನೆಗಳಾದ ಹಿಂದೂ ಜಾಗರಣ ವೇದಿಕೆ ಪೆರ್ನೆ, ಯುವ ಕೇಸರಿ ಗಡಿಯಾರ, ಯುವ ವೇದಿಕೆ ಪೆರಾಜೆ ಇವುಗಳ ಸಹಕಾರದೊಂದಿಗೆ ಅಂಬ್ಯುಲೆನ್ಸ್ ಚಾಲಕರನ್ನು ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಸಮ್ಮುಖದಲ್ಲಿ ಜಿಲ್ಲೆಯ ಸುಮಾರು 120ಕ್ಕೂ ಅಧಿಕ ತುರ್ತು ಜೀವರಕ್ಷಕರನ್ನು ಗುರುತಿಸಿ ಅಭಿನಂದಿಸಿದ್ದಲ್ಲದೆ ಅವರಿಗೆ ಆಹಾರ ಕಿಟ್‍ಗಳನ್ನು ನೀಡಿ ಗೌರವಿಸಲಾಯಿತು.
ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಶ್ರಫ್, ಜಿಲ್ಲಾ ಆಶಾ ಮೇಲ್ವೀಚಾರಕಿ ಕುಮುದಾ, ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ತೇಜಶ್ರೀ ಎಸ್. ಶೆಟ್ಟಿ, ನಗರ ಕಾರ್ಯಕ್ರಮ ವ್ಯವಸ್ಥಾಪಕ ಪಯಸ್ವಿನಿ, ಜಿಲ್ಲಾ ಡಾಟಾ ಮ್ಯಾನೇಜರ್ ವಿದ್ಯಾ, 108 ಜಿಲ್ಲಾ ವ್ಯವಸ್ಥಾಪಕ ಮಹಾಬಲ, 108 ವಾಹನ ನಿರ್ವಾಹಕ ವೆಂಕಟೇಶ್, ರಾಜ್ಯದ 108 ಅಂಬ್ಯುಲೆನ್ಸ್ ಅಧಿಕಾರಿಗಳಾದ ಗುರುರಾಜ್, ಸದಾಶಿವ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಪ್ರಮುಖರಾದ ರವೀಂದ್ರ ಕಂಬಳಿ, ದಿನೇಶ್ ಅಮ್ಟೂರು, ಸತೀಶ್ ಕುಂಪಲ, ಪುಷ್ಪರಾಜ್ ಚೌಟ, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಎಂ.ಪಿ. ದಿನೇಶ್, ವಿದ್ಯಾಧರ ರೈ ಅಮೈ, ಯುವಶಕ್ತಿ ಅಧ್ಯಕ್ಷ ದೇವಿಪ್ರಸಾದ್ ಬೇಂಗದಡಿ, ಯುವಕೇಸರಿ ಅಧ್ಯಕ್ಷ ಗಣೇಶ್ ಕೆದಿಲ, ಯುವ ವೇದಿಕೆ ಅಧ್ಯಕ್ಷ ನಿತಿನ್ ಅರ್ಬಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
0 comments:
Post a Comment