ಮಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್‍ನಿಂದಾಗಿ ಜನರ ಓಡಾಟ ಕಡಿಮೆಯಾಗಿ ಪ್ರಶಾಂತ ವಾತಾವರಣ ಮೂಡಿರುವ ರಸ್ತೆಗಳಲ್ಲಿ ಕಾಡು ಪ್ರಾಣಿಗಳು ಸಂಚಾರ ಆರಂಭಿಸಿವೆ.
ಕೇರಳದ ಹಲವೆಡೆ ಆನೆಗಳು ರಸ್ತೆಯಲ್ಲಿ ಕಾಣಿಸಿಕೊಂಡು ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಮಂಗಳೂರಿನ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಕಾಡುಕೋಣವೊಂದು ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಯಿತು. ಮಂಗಳವಾರ ಮುಂಜಾನೆ ನಗರದ ಹ್ಯಾಟ್ ಹಿಲ್ ಬಳಿ ದೊಡ್ಡ ಗಾತ್ರದ ಕಾಡುಕೋಣ ಏಕಾಏಕಿ ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದರು. ರಸ್ತೆಯುದ್ದಕ್ಕೂ ಓಡುತ್ತಿದ್ದ ಕಾಡುಕೋಣದ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಪೆÇಲೀಸರು ಸ್ಥಳಕ್ಕೆ ಆಗಮಿಸಿ ಶೋಧದಲ್ಲಿ ನಿರತವಾಗಿದ್ದಾರೆ. ಈ ಮಧ್ಯೆ ಕಾಡುಕೋಣವನ್ನು ಸುರಕ್ಷಿತವಾಗಿ ಹಿಡಿಯುವ ಕುರಿತು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಲಾಕ್‍ಡೌನ್ ಕಾರಣದಿಂದಾಗಿ ಜನಸಂಚಾರವಿಲ್ಲದ ಕಾರಣ ಪ್ರಾಣಿಗಳು ನಗರಕ್ಕೆ ಬಂದಿರಬೇಕು ಎನ್ನಲಾಗುತ್ತಿದೆ.
0 comments:
Post a Comment