ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೊನಾ ವೈರಸ್ ಬಗ್ಗೆ ಸರಕಾರ ತೀವ್ರ ಕಟ್ಟೆಚ್ಚರ ಘೋಷಿಸುತ್ತಿದ್ದರೂ ಯುವಕರ ಜಾಲಿ ರೈಡ್‍ಗೆ ಬ್ರೇಕ್ ಬಿದ್ದಿಲ್ಲ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಬಳಿ ಬೆಳ್ಳಂಬೆಳಗ್ಗೆ ಜಾಲಿ ರೈಡ್ ಹೊರಟ ಬೈಕ್ ಸವಾರ ಯುವಕರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನುಬಿದ್ದ ಪೆÇಲೀಸರು ಚೇಸ್ ಮಾಡಿ ವಾರ್ನಿಂಗ್ ನೀಡಿದ್ದಾರೆ.
ಜಾಲಿ ರೈಡ್ ಹೊರಟ ಬೈಕ್ ಸವಾರರ ಬೆನ್ನು ಬಿದ್ದ ಪೊಲೀಸರು ದಂಡ ವಿಧಿಸಿ ವಾರ್ನಿಂಗ್ ನೀಡಿದ್ದಾರೆ. ಯುವಕರು ಕುಣಿಗಲ್ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಶಾರಾಮಿ ಬೈಕ್‍ಗಳಲ್ಲಿ ಜಾಲಿ ರೈಡ್ ಹೊರಟಿದ್ದರು. ಕುದೂರು ಪಿಎಸ್‍ಐ ಮಂಜುನಾಥ್ ಅವರು ಬೈಕ್ ಚೇಸಿಂಗ್ ಮಾಡಿ ಸವಾರರನ್ನು ಅಡ್ಡಹಾಕಿ ಜಾಲಿ ರೈಡ್‍ಗೆ ಬ್ರೇಕ್ ಹಾಕಿದ್ದಾರೆ. ವೀಕೆಂಡ್ ಎಂದು ಅನಗತ್ಯ ರೇಸ್ ಬಂದವರಿಗೆ ಪಿಎಸ್‍ಐ ಮಂಜುನಾಥ್ ಸಖತ್ ಆಗಿ ಬಿಸಿ ಮುಟ್ಟಿಸಿದ್ದಾರೆ. ಸುಮಾರು 80 ಬೈಕ್‍ಗಳಿಗೆ ದಂಡ ಸಹಿತ ವಾರ್ನಿಂಗ್ ನೀಡಿದ್ದಾರೆ.
0 comments:
Post a Comment