ನವೆದಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಸಡಿಲಿಕೆಯ ನಡುವೆ, ಜೆಇಇ ಮತ್ತು ನೀಟ್ ಪರೀಕ್ಷಾ ದಿನಾಂಕವನ್ನು ಪ್ರಕಟಿಲಾಗಿದೆ. ಜುಲೈ 18ರಿಂದ ಜೆಇಇ ಪರೀಕ್ಷೆ ಆರಂಭವಾಗಲಿದ್ದು, ಜುಲೈ 23ರವರೆಗೆ ನಡೆಯಲಿದೆ. ಅಂತೆಯೇ ಜುಲೈ 26ರಂದು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಎಚ್.ಆರ್.ಡಿ. ಸಚಿವ ರಮೇಶ್ ಪೆÇಕ್ರಿಯಾಳ್, ಜಾಯಿಂಟ್ ಎಟೆರೆನ್ ಎಕ್ಸಾಂ (ಜೆಇಇ) ಯ ಮುಖ್ಯ ಪರೀಕ್ಷೆಯನ್ನು ಜುಲೈ 18 ರಿಂದ 23ರ ವರೆಗೆ ನಡೆಸಲಾಗುತ್ತದೆ. ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟರೆನ್ಸ್ ಟೆಸ್ಟ್ (ನೀಟ್) ಅಡ್ವಾನ್ಸ್ ಪರೀಕ್ಷೆ ಜುಲೈ 26ಕ್ಕೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
0 comments:
Post a Comment