ಬೆಂಗಳೂರು (ಕರಾವಳಿ ಟೈಮ್ಸ್) : ಕಳೆದ ಬುಧವಾರ ರಾತ್ರಿ ಘೋಷಣೆಯಾದ ಎಲ್ಲಾ ವಿಶೇಷ ಪ್ರಯಾಣಿಕ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಗ್‍ಗೆ ಬೇಡಿಕೆ ಕಂಡುಬಂದಿದೆ. ನಿನ್ನೆ ಬೆಳಗ್ಗೆ 10 ಗಂಟೆಗೆ ಆನ್‍ಲೈನ್‍ನಲ್ಲಿ ಆರಂಭವಾದ ಟಿಕೆಟ್ ಬುಕ್ಕಿಂಗ್‍ನಲ್ಲಿ ಆರಂಭವಾದ ಕೆಲವೇ ಹೊತ್ತಿನಲ್ಲಿ ಸಾಕಷ್ಟು ಟಿಕೆಟ್ ಬುಕ್ಕಿಂಗ್ ಆದವು.
ಜೂನ್ 1ರಿಂದ ಕರ್ನಾಟಕ ಮತ್ತು ದೇಶಾದ್ಯಂತ ಸಂಚರಿಸಲಿರುವ ವಿಶೇಷ ರೈಲಿನಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಿಶೇಷ ನಿಯಮಗಳನ್ನು ಹೊರಡಿಸಿದೆ.
ಟಿಕೆಟ್ ಬುಕ್ಕಿಂಗ್ ದೃಢಪಟ್ಟವರಿಗೆ ಮಾತ್ರ ರೈಲು ಹತ್ತಲು ಅವಕಾಶ, ರೈಲು ಹೊರಡುವುದಕ್ಕೆ 90 ನಿಮಿಷಗಳ ಮೊದಲು ಪ್ರಯಾಣಿಕರು ನಿಲ್ದಾಣದಲ್ಲಿರಬೇಕು. ಅಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಗಾಗಬೇಕು. ಕೊರೋನಾ ಲಕ್ಷಣ ರಹಿತ ಪ್ರಯಾಣಿಕರನ್ನು ಮಾತ್ರ ರೈಲು ಹತ್ತಲು ಬಿಡಲಾಗುತ್ತದೆ. ಪ್ರಯಾಣಿಕರ ಆರೋಗ್ಯ ತಪಾಸಣೆ ವೇಳೆ ಕೊರೋನಾ ಲಕ್ಷಣ ಕಂಡುಬಂದರೆ, ದೇಹದ ತಾಪಮಾನ ಹೆಚ್ಚಾಗಿದ್ದರೆ ಟಿಕೆಟ್ ದೃಢಪಟ್ಟಿದ್ದರೂ ಸಹ ಪ್ರಯಾಣ ಮಾಡಲು ಬಿಡಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರಯಾಣಿಕರ ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ರೈಲಿನಲ್ಲಿ ಇರುವಾಗ, ಹತ್ತುವಾಗ, ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ರೈಲಿನಲ್ಲಿ ಬೆಡ್ ಶೀಟ್, ಹೊದಿಕೆ ಇತ್ಯಾದಿಗಳಿರುವುದಿಲ್ಲ. ಆಹಾರಗಳು ಸಿಗುವುದಿಲ್ಲ, ಆದರೆ ಕೆಲವು ಆಹಾರಗಳನ್ನು ರೈಲು ನಿಲ್ದಾಣಗಳಲ್ಲಿ ಮತ್ತು ರೈಲಿನಲ್ಲಿ ಮಾರಾಟ ಮಾಡಬಹುದು. ಮಹಾರಾಷ್ಟ್ರದಿಂದ ರೈಲು ಬಂದು ಹೋಗಲು ಅವಕಾಶವಿದ್ದರೂ ಕೂಡ ರಾಜ್ಯ ಸರಕಾರ ನೆರೆ ರಾಜ್ಯಗಳಿಂದ ರೈಲುಗಳ ಆಗಮನಕ್ಕೆ ಅವಕಾಶ ನೀಡದಿರುವುದರಿಂದ ನೈರುತ್ಯ ರೈಲ್ವೆ ವಲಯ ಈ ಬಗ್ಗೆ ಚರ್ಚೆ ನಡೆಸುತ್ತಿದೆ.
0 comments:
Post a Comment