ಬೆಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ 5,000/- ರೂಪಾಯಿ ಪರಿಹಾರ ಪಡೆಯಲು ಚಾಲಕರಿಗೆ ಪ್ಯಾನ್‍ಕಾರ್ಡ್, ಪಿಟ್‍ನೆಸ್ ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಚಾಲಕರು ಸಂಕಷ್ಟದಲ್ಲಿರುವುದನ್ನು ಕಂಡು ಮುಖ್ಯಮಂತ್ರಿಗಳು ಆಟೋ ಮತ್ತು ಕ್ಯಾಬ್ ಚಾಲಕರಿಗೆ 5,000 ರೂಪಾಯಿ ಹಣವನ್ನು ಪರಿಹಾರವಾಗಿ ನೀಡಲು ಉದ್ದೇಶಿಸಿ ಚಾಲಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಪ್ಯಾನ್‍ಕಾರ್ಡ್ ಮತ್ತು ಪಿಟ್‍ನೆಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿತ್ತು. ಈ ಕುರಿತು ತೀವ್ರ ವಿರೋಧ ವ್ಯಕ್ತವಾದ ಕಾರಣ ಹೊಸ ನಿಯಮ ತೆಗೆದುಹಾಕುವ ಮೂಲಕ ಸರಕಾರ ನಿಯಮ ಸಡಿಲಿಕೆ ಮಾಡಿದೆ.
ಗುರುವಾರ ವಿಕಾಸಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶಾಸಕ ದಿನೇಶ್ ಗುಂಡೂರಾವ್ ಹಾಗೂ ಸಾರಿಗೆ ಆಯುಕ್ತ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಾಲಕರು ನೆರವು ಪಡೆಯಲು ಪ್ಯಾನ್‍ಕಾರ್ಡ್ ಮತ್ತು ಪಿಟ್‍ನೆಸ್ ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಪರಿಹಾರ ಪಡೆಯಲು ಚಾಲಕರು ಪ್ಯಾನ್ ಕಾರ್ಡ್ ಮತ್ತು ಫಿಟ್‍ನೆಸ್ ಪತ್ರವನ್ನು ಕಡ್ಡಾಯವಾಗಿ ನೀಡಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಪಿಟ್‍ನೆಸ್ ಪತ್ರವನ್ನು ನೀಡಲು ಕಷ್ಟಕರವಾಗಿದೆ. ಎಷ್ಟೋ ಆಟೋ ಚಾಲಕರ ಬಳಿ ಪ್ಯಾನ್ ಕಾರ್ಡ್ ಇರುವುದಿಲ್ಲ. ಇಂತಹವರಿಗೆ ಪ್ಯಾನ್ ನೀಡಲು ಕಷ್ಟವಾಗಿದೆ ಎಂದು ಚಾಲಕರ ಒಕ್ಕೂಟ ನಿಯಮ ಸಡಿಲಿಸುವಂತೆ ಆಗ್ರಹಿಸಿತ್ತು.
ಈ ಎಲ್ಲಾ ಅಂಶಗಳನ್ನು ಗಮದಲ್ಲಿಟ್ಟುಕೊಂಡು ಚಾಲಕರಿಗೆ ಕೇವಲ ಡಿಎಲ್ (ಚಾಲನಾ ಪರವಾನಗಿ) ಮತ್ತು ಆಧಾರ್ ಕಾರ್ಡ್ ಪಡೆಯುವ ಮೂಲಕ ಚಾಲಕರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಚಾಲಕರ ಬೇಡಿಕೆಗೆ ಸ್ಪಂದಿಸಬೇಕು ಎಂದು ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಆಗ್ರಹಿಸಿದ್ದರು.
0 comments:
Post a Comment