ಯುಎಇಯಿಂದ ಕೇರಳಕ್ಕೆ ಬಂದಿಳಿದ 2 ವಿಮಾನಗಳು : ಅನಿವಾಸಿಗಳ ತವರು ಪ್ರಯಾಣಕ್ಕೆ ಚಾಲನೆ - Karavali Times ಯುಎಇಯಿಂದ ಕೇರಳಕ್ಕೆ ಬಂದಿಳಿದ 2 ವಿಮಾನಗಳು : ಅನಿವಾಸಿಗಳ ತವರು ಪ್ರಯಾಣಕ್ಕೆ ಚಾಲನೆ - Karavali Times

728x90

8 May 2020

ಯುಎಇಯಿಂದ ಕೇರಳಕ್ಕೆ ಬಂದಿಳಿದ 2 ವಿಮಾನಗಳು : ಅನಿವಾಸಿಗಳ ತವರು ಪ್ರಯಾಣಕ್ಕೆ ಚಾಲನೆ



ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್‍ಡೌನ್‍ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಐತಿಹಾಸಿಕ ಅತೀ ದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಗುರುವಾರದಿಂದ ಆರಂಭಗೊಂಡಿದೆ.

ಅಬುಧಾಬಿ ಹಾಗೂ ದುಬೈಯಿಂದ 354 ಪ್ರಯಾಣಿಕರನ್ನು ಹೊತ್ತ 2 ವಿಮಾನಗಳು ಕೇರಳ ರಾಜ್ಯಕ್ಕೆ ಗುರುವಾರÀ ರಾತ್ರಿ ಬಂದಿಳಿದಿವೆ. 177 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮೊದಲ ವಿಮಾನ 10.9ಕ್ಕೆ ಕೊಚ್ಚಿಗೆ ಬಂದಿಳಿದರೆ, ಇಷ್ಟೇ ಸಂಖ್ಯೆ ಪ್ರಯಾಣಿಕರನ್ನು ಕರೆತಂದ ಮತ್ತೊಂದು ವಿಮಾನ ರಾತ್ರಿ 10.32ಕ್ಕೆ ಕಲ್ಲಿಕೋಟೆಗೆ ಬಂದಿಳಿಯಿತು.

ಹೀಗೆ ಬಂದವರಲ್ಲಿ 9 ಹಸುಗೂಸುಗಳು, 49 ಗರ್ಭಿಣಿಯರು ಸೇರಿದ್ದರು. ಭಾರತಕ್ಕೆ ಬಂದಿಳಿದ 354 ಜನರ ಪೈಕಿ ಗರ್ಭಿಣಿಯರು ಸೇರಿ ಅನಿವಾರ್ಯವಿರುವವರಿಗೆ ಅಗತ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿ, ಉಳಿದವರನ್ನು 14 ದಿನಗಳ ಕಾಲ ಕ್ವಾರಂಟೈನ್‍ಗೆ ಕಳುಹಿಸಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಯುಎಇಯಿಂದ ಕೇರಳಕ್ಕೆ ಬಂದಿಳಿದ 2 ವಿಮಾನಗಳು : ಅನಿವಾಸಿಗಳ ತವರು ಪ್ರಯಾಣಕ್ಕೆ ಚಾಲನೆ Rating: 5 Reviewed By: karavali Times
Scroll to Top