ಕೊರೋನಾ ನಿರ್ಬಂಧ ಕಾರಣ ಹಬ್ಬದ ದಿನಗಳಲ್ಲಿ ಸದಾ ಜನಜಂಗುಳಿ ಇರುತ್ತಿದ್ದ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಪಾಣೆಮಂಗಳೂರು ಆಲಡ್ಕ ಪರಿಸರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು |
ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಹಿನ್ನಲೆಯಲ್ಲಿ ಮಸೀದಿಗಳು ನಿರ್ಬಧಿಸಲ್ಪಟ್ಟಿದ್ದು, ತಾಲೂಕಿನಾದ್ಯಂತ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಭಾನುವಾರ ಸರಳವಾಗಿ ಆಚರಿಸಿಕೊಂಡರು. ಮಸೀದಿ-ಈದ್ಗಾಗಳಿಗೆ ತೆರಳಲು ಅವಕಾಶ ಇಲ್ಲದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡ ಮುಸ್ಲಿಮರು ತಮ್ಮ ಮನೆಗಳಲ್ಲೇ ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರಸ್ಪರ ಹಸ್ತ ಲಾಘವ, ಆಲಿಂಗನ, ಸಂಬಂಧಿಕರ ಹಾಗೂ ಸ್ನೇಹಿತರ ಮನೆ ಭೇಟಿಗೂ ಬ್ರೇಕ್ ಬಿದ್ದಿತ್ತು. ಭಾನುವಾರ ಸರಕಾರದ ಆದೇಶದ ಪ್ರಕಾರ ಭಾನುವಾರ ಸಂರ್ಪೂ ಲಾಕ್‍ಡೌನ್ ಇದ್ದುದರಿಂದ ಅತ್ತಿತ್ತ ಸಂಚಾರವೂ ಇಲ್ಲದಂತಾಗಿತ್ತು. ಪರಿಣಾಮ ಪೆರ್ನಾಳ್ ದಿನಗಳಲ್ಲಿ ಜನಜಂಗುಳಿಯಿಂದ ಗಿಜಿಗಿಡುತ್ತಿದ್ದ ತಾಲೂಕಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳೂ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡು ಬಂತು.
0 comments:
Post a Comment