ಮೇ 25ರಿಂದ ವಿಮಾನ ಸೇವೆ ಪುನರ್ ಆರಂಭಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮೆಟೆಡ್ ಏರ್ ಪೋರ್ಟ್ ಆಪರೇಟರ್ ಅಧಿಕೃತವಾಗಿ ತಿಳಿಸಿದ್ದಾರೆ.
ಸಾಮಾಜಿಕ ಅಂತರ ನಿಯಮ ಖಾತ್ರಿಪಡಿಸಿಕೊಳ್ಳಲು ಟರ್ಮಿನಲ್ ಸಾಮರ್ಥ್ಯ ಕಡಿಮೆ ಮಾಡಿಕೊಳ್ಳುವುದರೊಂದಿಗೆ 107 ವಿಮಾನಗಳು ಆಗಮಿಸಲಿದ್ದು, 108 ವಿಮಾನಗಳು ನಿರ್ಗಮಿಸಲಿವೆ. ಪ್ರತಿದಿನ ಸರಾಸರಿ 215 ವಿಮಾನಗಳ ಸಂಚಾರವನ್ನು ಬೆಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಮಾಡಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಈ ಬೇಸಿಗೆಯಲ್ಲಿ ಮೂಲ ವೇಳಾಪಟ್ಟಿಯ ಕೇವಲ ಶೇ. 32% ಮಾತ್ರ ಜಾರಿಯಾಗುವ ಸಾಧ್ಯತೆ ಇದೆ. ವಿಮಾನಯಾನ ಸಂಚಾರದ ವೇಳಾಪಟ್ಟಿಯಲ್ಲಿ ಅಗ್ರ ವಿಮಾನಯಾನ ಕಂಪನಿಗಳಾದ ಇಂಡಿಗೊ 47% ರಷ್ಟಿದ್ದರೆ, ಏರ್ ಏಷ್ಯಾ ಮತ್ತು ಸ್ಪೈಸ್ ಜೆಟ್ ಕ್ರಮವಾಗಿ 16% ಮತ್ತು 14% ಅನ್ನು ಹೊಂದಿವೆ ಎಂದು ಹೇಳಲಾಗಿದೆ.
ಕೆಐಎಯಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಓಡಿಸಲಿರುವ ಇಂಡಿಗೊದಿಂದ ತಾತ್ಕಾಲಿಕವಾಗಿ 49 ವಿಮಾನಗಳು ನಿರ್ಗಮಿಸಲಿವೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ. ಆದರೆ, ಬರುವ ಆಗಮಿಸುವ ವಿಮಾನಗಳ ಸಂಖ್ಯೆಯನ್ನು ಅವರು ನೀಡಲಿಲ್ಲ. ಏರ್ ಇಂಡಿಯಾದ 6 ವಿಮಾನಗಳು ಕೆಐಎಗೆ ಆಗಮನ ಮತ್ತು ನಿರ್ಗಮನ ನಡೆಸಲಿವೆ. ಸ್ಪೈಸ್ ಜೆಟ್ ನ 17 ವಿಮಾನಗಳು ಸಂಚರಿಸಲಿವೆ ಎಂದು ಅವರು ತಿಳಿಸಿದ್ದಾರೆ.
0 comments:
Post a Comment