ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕೆಲವಡೆ ಆಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಅದನ್ನು ತಡೆಯುವಂತೆ ಜಿಲ್ಲಾಧಿಕಾರಿಗೆ ರಮನಾಥ ರೈ ಮನವಿ ನೀಡಿದ್ದು ನಾಚಿಗೇಡಿತನದ್ದು. ಆಕ್ರಮ ಮರಳುಗಾರಿಕೆಗೆ ಮೂಲ ಕಾರಣ ಕಾಂಗ್ರೆಸ್ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲೂಕಿನಲ್ಲಿ ಕೇವಲ ಕಡೇಶ್ವಾಲ್ಯ, ಮಣಿನಾಲ್ಕೂರು, ಕರ್ಪೆ ಪ್ರದೇಶದಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿರುವುದಲ್ಲ. ಉಳಿದ ಕಡೆ ಆಕ್ರಮ ಮರಳುಗಾರಿಕೆ ಬಗ್ಗೆ ರೈ ಅವರು ಯಾಕೆ ಪ್ರಸ್ತಾಪ ಮಾಡಿಲ್ಲ. 6 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿಯಾಗಿ ಸಕ್ರಮ ಮರಳುಗಾರಿಕೆಗೆ ಸಮರ್ಪಕ ಮರಳು ನೀತಿ ಮಾಡದೇ ಆಕ್ರಮ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದ ಅವರು ಇದೀಗ ತನ್ನ ಮುಖವನ್ನು ಉಳಿಸಿಕೊಳ್ಳಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಅವರ ವರ್ತನೆ ಖಂಡನೀಯ ಎಂದಿದ್ದಾರೆ.
ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು ತನ್ನ ಕ್ಷೇತ್ರದಲ್ಲಿ ಯಾವುದೇ ಆಕ್ರಮ ಮರಳುಗಾರಿಕೆಗೆ ಅವಕಾಶ ನೀಡದೆ, ಕಡಿವಾಣ ಹಾಕಿ. ಅರ್ಹ ಬಡ ಕುಟುಂಬ ಕನಿಷ್ಟ ದರದಲ್ಲಿ ಮರಳು ಸಿಗುವಂತೆ ಮಾಡಿ. ಸರಕಾರದಿಂದ ನೂತನ ಮರಳು ನೀತಿ ಜಾರಿಗೊಳಿಸುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ರೈ ಅವರಿಗೆ ನುಂಗಲಾರದ ತುತ್ತಾಗಿದೆ ಎಂದ ದೇವಪ್ಪ ಪೂಜಾರಿ ಆಕ್ರಮ ಮರಳುಗಾರಿಕೆಯ ಕಿಂಗ್‍ಪಿನ್ ರಮನಾಥ ರೈ ಅವರ ಜೊತೆಗೆ ತಿರುಗಾಡುತ್ತಿದ್ದು, ಜಿಲ್ಲಾಧಿಕಾರಿಗೆ ಮನವಿ ಕೊಡುವಾಗ ಅವರ ಜೊತೆ ಇಲ್ಲದೆ ಇರುವುದು ಉದ್ದೇಶ ಪೂರ್ವಕವೇ ಆಗಿದೆ. ಅವರದೇ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಆಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದು ಆಕ್ರಮ ಮರಳುಗಾರಿಕೆಯ ಬಗ್ಗೆ ಮಾತಾನಾಡುವ ನೈತಿಕತೆ ರೈ ಅವರಿಗೆ ಇಲ್ಲ ಎಂದು ದೇವಪ್ಪ ಪೂಜಾರಿ ಟಾಂಗ್ ನೀಡಿದ್ದಾರೆ.
ರಾಜೇಶ್ ನಾಯಕ್ ಕ್ಷೇತ್ರÀ ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕೆಲಸ ಆಗುತ್ತಿದ್ದು, ಇಲಾಖಾಧಿಕಾರಿಗಳು ಯಾವುದೇ ಒತ್ತಡ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ತನ್ನ ಶಾಸಕತ್ವದ ಅವಧಿಯಲ್ಲಿ ರಾಜಧರ್ಮ ಪಾಲನೆ ಮಾಡುವುದಾಗಿ ಹೇಳಿಕೆ ನೀಡಿದ್ದ ಶಾಸಕರು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನುಡಿದಂತೆ ನಡೆಯುತ್ತಿದ್ದಾರೆ. ಆಕ್ರಮ ಚಟುವಟಿಕೆಗಳಿಗೆ ಶಾಸಕರು ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ. ಅಕ್ರಮ ಮರಳುಗಾರಿಕೆಗೆ ಇತರ ಅಕ್ರಮ ಚಟುವಟಿಕೆಗೆ ಕಾಂಗ್ರೆಸ್ ಮೂಲ ಪ್ರೇರಣೆಯಾಗಿದ್ದು ಇವರ ಆಡಳಿತ ಸಮಯದಲ್ಲಿ ಏನೆಲ್ಲಾ ಆಗಿದೆ ಎಂಬುದರ ಬಗ್ಗೆ ಆತಾವಲೋಕನ ಮಾಡುವುದು ಒಳಿತು ಎಂದ ಅವರು ರಮಾನಾಥ ರೈ ಅವರ ನಡವಳಿಕೆಗೆ ಕ್ಷೇತ್ರ ಬಿಜೆಪಿ ಸಮಿತಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
0 comments:
Post a Comment