ಮಂಗಳೂರು (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾ ವತಿಯಿಂದ ಲಾಕ್‍ಡೌನ್ ಸಂಕಷ್ಟಕ್ಕೊಳಗಾದ ದೇರಳಕಟ್ಟೆ ಹಾಗೂ ಪರಿಸರ ಪ್ರದೇಶದ ಅರ್ಹ ಕುಟುಂಬಗಳಿಗೆ 3ನೇ ಹಂತದ ರೇಶನ್ ಕಿಟ್ ವಿತರಣಾ ಕಾರ್ಯಕ್ರಮವು ಗ್ರೀನ್ ಗ್ರೌಂಗ್ ಮದರಸದಲ್ಲಿ ಇತ್ತೀಚೆಗೆ ನಡೆಯಿತು.
ಶಾಖಾಧ್ಯಕ್ಷ ನಿಯಾಝ್ ಡಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇರಳಕಟ್ಟೆ ಬದ್ರಿಯಾ ಮಸೀದಿ ಖತೀಬ್ ರಿಯಾಝ್ ರಹ್ಮಾ£ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾ ಕಾರ್ಯಕರ್ತರು ಲಾಕ್‍ಡೌನ್ ಪ್ರಾರಂಭದಿಂದಲೂ ನಿರಂತರವಾಗಿ ದೇರಳಕಟ್ಟೆ ಹಾಗೂ ಪರಿಸರ ಪ್ರದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಗೂ ಅಸಹಾಯಕರಿಗೆ ಮದ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ, ಸುಮಾರು 270ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ, ಆಂಬ್ಯುಲೆನ್ಸ್ ಮೂಲಕ ರೋಗಿಗಳ ಸೇವೆ, ರಂಝಾನಿನ ಪ್ರತಿ ದಿವಸವೂ ದೇರಳಕಟ್ಟೆ ಪರಿಸರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳು ಹಾಗೂ ಅವರ ಜೊತೆ ಸಹಾಯಕರಾಗಿ ಬರುವ 200ಕ್ಕೂ ಹೆಚ್ಚು ಮಂದಿ ಉಪವಾಸಿಗರಿಗೆ ಇಫ್ತಾರ್ ವ್ಯವಸ್ಥೆ ಸಹಿತ ಹಲವಾರು ಸಾಮಾಜಿಕ ಸೇವೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿದ್ದು, ಇಂತಹ ಸಂಘಟಕರು ನಾಡಿಗೆ ಅಭಿಮಾನವಾಗಿದೆ ಎಂದರು.
ಎಸ್ಕೆಎಸ್ಸೆಸ್ಸೆಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುರ್ರಹ್ಮಾನ್ ದಾರಿಮಿ ಪ್ರಾರ್ಥಿಸಿದರು. ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ, ದೇರಳಕಟ್ಟೆ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನಾಟೆಕ್ಕಲ್, ಮನಾರುಲ್ ಹುದಾ ಮದರಸ ಅಧ್ಯಕ್ಷ, ಎಸ್‍ವೈಎಸ್ ದೇರಳಕಟ್ಟೆ ಶಾಖಾಧ್ಯಕ್ಷ ಸಯ್ಯಿದ್ ಅಲಿ, ಕೋಶಾಧಿಕಾರಿ ಹಾಜಿ ಅಬ್ದುರ್ರಹ್ಮಾನ್, ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಷನ್ ಅಧ್ಯಕ್ಷ ಹಾಜಿ ಇಲ್ಯಾಸ್ ಡಿ., ಗ್ರೀನ್ ಗ್ರೌಂಡ್ ಮನಾರುಲ್ ಹುದಾ ಮದರಸ ಉಪಾಧ್ಯಕ್ಷ ಮುಹಮ್ಮದ್ ಪನೀರ್, ಎಸ್‍ವೈಎಸ್ ಉಳ್ಳಾಲ ಶಾಖಾ ಪ್ರದಾನ ಕಾರ್ಯದರ್ಶಿ ನಝೀರ್ ಉಳ್ಳಾಲ, ಉದ್ಯಮಿಗಳಾದ ತಾಜುದ್ದೀನ್, ಲತೀಫ್, ಇಕ್ಬಾಲ್, ಎಚ್.ಆರ್. ಇಬ್ರಾಹಿಂ ಬದ್ಯಾರ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾ ಉಪಾಧ್ಯಕ್ಷ ಫೈಝಲ್ ಡಿ.ಎಂ., ಪ್ರದಾನ ಕಾರ್ಯದರ್ಶಿ ಮುಹಮ್ಮದ್ ಮುನ್ಸಿದ್, ಕೋಶಾಧಿಕಾರಿ ಮುಹಮ್ಮದ್ ಇರ್ಫಾನ್ ಡಿ., ಪ್ರಮುಖರಾದ ಹನೀಫ್ ದೇರಳಕಟ್ಟೆ. ರಹ್ಮತ್ ಪಾಲ್ದಡಿ, ಯಾಕೂಬ್, ಹರ್ಷದ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment