ಕಡಬ (ಕರಾವಳಿ ಟೈಮ್ಸ್) : ತಾಲೂಕಿನ ಕಳಾರ ಎಂಬಲ್ಲಿ ಇಂದು ಮುಂಜಾನೆ ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇಲ್ಲಿನ ನಿವಾಸಿ ಅಬ್ದುಲ್ ಖಾದರ್ (65) ಎಂಬವರೇ ಹಠಾತ್ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿ.
ಪ್ರತಿನಿತ್ಯವೂ ಮುಂಜಾನೆ ಇಲ್ಲಿನ ಮಸೀದಿಗೆ ತಹಜ್ಜುದ್ ನಮಾಝ್ ನಿರ್ವಹಿಸಲು ಬರುತ್ತಿದ್ದ ಅಬ್ದುಲ್ ಖಾದರ್ ಗುರುವಾರ ಮುಂಜಾನೆ ಕೂಡಾ 4 ಗಂಟೆ ಸುಮಾರಿಗೆ ಮಸೀದಿಗೆ ಆಗಮಿಸಿ ನೇರವಾಗಿ ತಹಜ್ಜುದ್ ನಮಾಝಿನಲ್ಲಿ ಏರ್ಪಡುತ್ತಿದ್ದಂತೆ ಅಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ಮಸೀದಿಯಲ್ಲೇ ಇದ್ದ ಮತ್ತೋರ್ವ ವ್ಯಕ್ತಿ ಖಾದರ್ ಎಂಬವರು ಇದನ್ನು ಗಮನಿಸಿ ತಕ್ಷಣ ಅಬ್ದುಲ್ ಖಾದರ್ ಬಳಿ ತೆರಳಿ ಉಪಚರಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾವಳಿಯ ಈ ಎಲ್ಲಾ ದೃಧ್ಯಾವಳಿಗಳು ಮಸೀದಿಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
0 comments:
Post a Comment