ದೇಶದಲ್ಲಿ ಕೊರೋನಾ ರುದ್ರ ತಾಂಡವ : ಚೀನಾ ಓವರ್‍ಟೇಕ್ ಮಾಡಿದ ಭಾರತ - Karavali Times ದೇಶದಲ್ಲಿ ಕೊರೋನಾ ರುದ್ರ ತಾಂಡವ : ಚೀನಾ ಓವರ್‍ಟೇಕ್ ಮಾಡಿದ ಭಾರತ - Karavali Times

728x90

16 May 2020

ದೇಶದಲ್ಲಿ ಕೊರೋನಾ ರುದ್ರ ತಾಂಡವ : ಚೀನಾ ಓವರ್‍ಟೇಕ್ ಮಾಡಿದ ಭಾರತ



85 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ, ಒಂದೇ ದಿನ 3970 ಮಂದಿಯಲ್ಲಿ ಸೋಂಕು ಪತ್ತೆ


ನವದೆಹಲಿ (ಕರಾವಳಿ ಟೈಮ್ಸ್) : ಮಾರಕ ಸೋಂಕು ಕೋವಿಡ್-19 ವೈರಸ್ ಭಾರತದಲ್ಲಿ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಲೇ ಇದೆ. ದೇಶದಲ್ಲಿ 24 ಗಂಟೆಗಳಲ್ಲಿ 3,970 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 85,970ಕ್ಕೇರಿದೆ. ಈ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಚೀನಾವನ್ನು ಭಾರತ ಹಿಂದಿಕ್ಕಿದ್ದು, ತೀವ್ರ ಆತಂಕವನ್ನು ಸೃಷ್ಟಿಸಿ ಹಾಕಿದೆ.

ವಿಶ್ವದಲ್ಲಿ ಅತೀ ಹೆಚ್ಚು ಸೋಂಕಿತರ ದೇಶಗಳ ಪೈಕಿ ಭಾರತಕ್ಕೆ 11ನೇ ಸ್ಥಾನ ದಕ್ಕುತ್ತಿದೆ. ಪ್ರಸ್ತುತ 1.16ಲಕ್ಷ ಸೋಂಕಿತರೊಂದಿಗೆ ಇರಾನ್ 10ನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಸೋಂಕಿತರು ಪ್ರತಿನಿತ್ಯ ಸೋಂಕು ಏರುತ್ತಾ ಹೋದರೆ, ಇರಾನ್ ದೇಶವನ್ನೂ ಭಾರತ ಹಿಂದಿಕ್ಕುವ ದಿನಗಳು ದೂರವಿಲ್ಲ.

ದೇಶದಲ್ಲಿ ಶುಕ್ರವಾರ ಒಂದೇ ದಿನ 3,970 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 24 ಗಂಟೆಗಳಲ್ಲಿ 103 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 2752ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ತಿಳಿಸಿದೆ.

ಈ ನಡುವೆ 85,940 ಮಂದಿ ಸೋಂಕಿತರ ಪೈಕಿ 30,153 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ ಇನ್ನೂ 53,035 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ.

2019 ರ ನ. 17 ರಂದು ಚೀನಾದಲ್ಲಿ ಮೊದಲ ಕೊರೋನಾ ಕೇಸು ಪತ್ತೆಯಾಗಿತ್ತು. ಈ ನಡುವೆ ಮೃತರ ಸಂಖ್ಯೆಯಲ್ಲಿ ಭಾರತದ ಚೀನಾ ಮಟ್ಟಕ್ಕೆ ತಲುಪಿಲ್ಲ ಎಂಬುದು ತುಸು ಸಮಾಧಾನಕರ ವಿಚಾರವಾಗಿದೆ. ಈ ಹಂತದಲ್ಲಿ ಚೀನಾದಲ್ಲಿ ಸಾವಿನ ಸಂಖ್ಯೆ ಶೇ. 5.5 ರಷ್ಟಿತ್ತು. ಆದರೆ, ಭಾರತದಲ್ಲಿ ಶೇ.3.2 ರಷ್ಟಿದೆ. ಇಷ್ಟು ಮಾತ್ರ ಸಮಾಧಾನಪಡಲು ಭಾರತಕ್ಕಿರುವುದು.
  • Blogger Comments
  • Facebook Comments

0 comments:

Post a Comment

Item Reviewed: ದೇಶದಲ್ಲಿ ಕೊರೋನಾ ರುದ್ರ ತಾಂಡವ : ಚೀನಾ ಓವರ್‍ಟೇಕ್ ಮಾಡಿದ ಭಾರತ Rating: 5 Reviewed By: karavali Times
Scroll to Top