ಸೋಂಕಿತರ ಒಟ್ಟು ಸಂಖ್ಯೆ 659ಕ್ಕೇರಿಕೆ
ವಿಜಯಪುರದಲ್ಲಿ ವೃದ್ಧೆ ಸಾವು
ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೋನಾ ಪ್ರಭಾವ ಇನ್ನೂ ತಣ್ಣಗಾದಂತೆ ಕಂಡು ಬರುತ್ತಿಲ್ಲ. ಮಂಗಳವಾರ ಮತ್ತೆ 8 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ತಿಳಿಸಿದೆ.
ಸೋಂಕು ಕಾಣಿಸಿಕೊಂಡಿರುವ 659 ಮಂದಿಯ ಪೈಕಿ 28 ಮಂದಿ ಸಾವಿಗೀಡಾಗಿದ್ದು, 324 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರಲ್ಲಿ ಬೆಂಗಳೂರು ನಗರದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದಂತೆ ಬಾಗಕೋಟೆಯಲ್ಲಿ 2, ಬಳ್ಳಾರಿ 1, ದಕ್ಷಿಣ ಕನ್ನಡದಲ್ಲಿ 1 ಮತ್ತು ಉತ್ತರ ಕನ್ನಡದ ಭಟ್ಕಳದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ವಿಜಯಪುರದಲ್ಲಿ ವೃದ್ಧೆ ಸಾವು
ರಾಜ್ಯದಲ್ಲಿ ಮಂಗಳವಾರ 640ನೇ ಕೊರೊನಾ ಪೀಡಿತ 62 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.ಸೋಂಕಿತರು ಈ ಮೊದಲೇ ಮಧುಮೇಹ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ರೋಗಿ ಸಂಖ್ಯೆ 228 ಸಂಪರ್ಕದಿಂದ ಮೃತ ಮಹಿಳೆಗೆ ಸೋಂಕು ತಗುಲಿತ್ತು.
ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ ಮಹಿಳೆಗೆ ಸೋಮವಾರ ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಸೋಂಕಿತರ ವಿವರ
1. ರೋಗಿ 652 : ಬೆಂಗಳೂರಿನ 30 ವರ್ಷದ ಮಹಿಳೆ. ಸೋಂಕು ಸಂಪರ್ಕ ಮಾಹಿತಿಯನ್ನು ಪತ್ತೆ ಹಚ್ಚಲಾಗುತ್ತಿದೆ.2. ರೋಗಿ 653 : ಬೆಂಗಳೂರಿನ 40 ವರ್ಷದ ಪುರುಷ. ರೋಗಿ 420ರ ಜೊತೆ ಸಂಪರ್ಕ
3. ರೋಗಿ 654 : ಬೆಂಗಳೂರಿನ 45 ವರ್ಷದ ಪುರುಷ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
4. ರೋಗಿ 655 : ಬಾಗಲಕೋಟೆಯ 29 ವರ್ಷದ ಮಹಿಳೆ. ರೋಗಿ 367 ಮತ್ತು 368ರ ಸಂಪರ್ಕದಲ್ಲಿದ್ದರು.
5. ರೋಗಿ 656 : ಬಾಗಲಕೋಟೆಯ 29 ವರ್ಷದ ಪುರುಷ. ರೋಗಿ 367 ಮತ್ತು 368ರ ಸಂಪರ್ಕದಲ್ಲಿದ್ದರು.
6. ರೋಗಿ 657 : ಬಳ್ಳಾರಿ 43 ವರ್ಷದ ಪುರುಷ. ಉತ್ತರಾಖಂಡಕ್ಕೆ ಪ್ರಯಾಣದ ಹಿನ್ನೆಲೆ
7. ರೋಗಿ 658 : ದಕ್ಷಿಣ ಕನ್ನಡ 51 ವರ್ಷದ ಪುರುಷ. ರೋಗಿ 536ರ ಜೊತೆ ಸಂಪರ್ಕದಲ್ಲಿದ್ದರು.
8. ರೋಗಿ 659 : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 28 ವರ್ಷದ ಯುವಕ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
0 comments:
Post a Comment