ಚಿಕ್ಕಬಳ್ಳಾಪುರ (ಕರಾವಳಿ ಟೈಮ್ಸ್) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಕರೋನಾ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರ ತಾಲೂಕು ಸಂಯೋಜಕ ಸ್ಟುಡಿಯೋ ಶ್ರೀನಿವಾಸ್ ಅವರು ಮಾತನಾಡಿ, ಚಿಕ್ಕಬಳ್ಳಾಪುರ ತಾಲೂಕಿನ ಸುಮಾರು 14 ಹಳ್ಳಿಗಳಾದ ಮುಸ್ಟುರು, ಗೇರಹಳ್ಳಿ, ಆವಳಗುರುಕಿ, ಸೂಲಕುಂಟೆ, ಎಸ್. ಗೊಲ್ಲಹಳ್ಳಿ, ನಲ್ಲಗುಟ್ಟಹಳ್ಳಿ, ಜಂಗಮರಪ್ಪಹಳ್ಳಿ, ಇಟ್ಟಪ್ಪನಹಳ್ಳಿ, ಸಾದೇನಹಳ್ಳಿ, ಕೇತೆನಹಳ್ಳಿ, ಆನೆಮೊಡಗು, ಎ. ಕೊತ್ತನೂರು, ನಾಸ್ಥಿಮ್ಮನ ಹಳ್ಳಿ ಗ್ರಾಮಗಳಿಗೆ ಭೇಟಿ ಮಾಡಿ ಹಳ್ಳಿಯ ಜನರಲ್ಲಿ ಕರೋನಾ ಮಹಾಮಾರಿಯ ಬಗ್ಗೆ, ಕೊರೊನಾÀ ಹರಡದಂತೆ ನಾವೆಲ್ಲರೂ ಒಟ್ಟಾಗಿ ಕರೋನಾ ವೈರಸ್ ವಿರುದ್ಧ ಹೋರಾಡೋಣ. ರೋಗ ಹರಡದಂತೆ ಎಲ್ಲರೂ ಜಾಗೃತಿ ವಹಿಸೋಣ. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳಬೇಡಿ ಎಂದು ಸಾರ್ವಜನಕರಿಗೆ ಅರಿವು ಮೂಡಿಸಿದರು.
ಸ್ನೇಕ್ ಪೃಥ್ವಿರಾಜ್ ಮಾತನಾಡಿ, ನಿಮಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ (ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು) ವೈದ್ಯರನ್ನು ಭೇಟಿ ಮಾಡಿ ಎಂದು ತಿಳಿಸಿದರು.
ಆಶಾ ಮಂಚನಬಲೆ ಮಾತನಾಡಿ, ಈ ರೋಗದ ಲಕ್ಷಣಗಳು, ಚಿಹ್ನೆಗಳಿದ್ದರೆ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ, ಹೆಚ್ಚು ಜನ ಸಂದಣಿ ಇರುವ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ಎಂದರು.
ಈ ಸಂದರ್ಭ ಮೋಹನ್ ಕುಮಾರ್ ಗೌಡ, ಗಂಗಾಧರ್, ಪ್ರಜ್ವಲ್ ಅವರು ಸಾರ್ವಜನಿಕರಿಗೆ ಹಳ್ಳಿಯಲ್ಲಿನ ಮಕ್ಕಳಿಗೆ ಹಿರಿಯ ನಾಗರಿಕರಿಗೆ ಕೋರೋನಾ ಕರಪತ್ರಗಳನ್ನು ಹಂಚುವುದರ ಮೂಲಕ ಜಾಗೃತಿ ಮೂಡಿಸಿದರು.
0 comments:
Post a Comment