ಚಿಕ್ಕಬಳ್ಳಾಪುರ (ಕರಾವಳಿ ಟೈಮ್ಸ್) : ನಗರದ ವಾಪಸಂದ್ರ ವಾರ್ಡ್ ಸಂಖ್ಯೆ 1 ಹಾಗೂ 8ರಲ್ಲಿ ಬಡ ಜನತೆಗೆ ಆಹಾರ ಧಾನ್ಯಗಳ ಕಿಟ್ ಆಶಾ ಫೌಂಡೇಶನ್ ಸಂಸ್ಥೆಯಿಂದ ವಿತರಣೆ ಮಾಡಲಾಯಿತು.
ಆಶಾ ಫೌಂಡೇಶನ್ ಸಂಸ್ಥಾಪಕ ಕಾರ್ಯದರ್ಶಿ ಆಶಾ ಮಂಚನ ಬಲೆ ಅವರು ಮಾತನಾಡಿ, ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಬಡವರ್ಗದ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಸ್ಥೆಯು ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಸಕ್ಕರೆ, ರವೆ, ಚಿಕ್ಕ ಮಕ್ಕಳಿಗೆ ಬಿಸ್ಕೆಟ್‍ಗಳನ್ನು ನೀಡಿದ್ದೇವೆ. ಇದೇ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದವರು ಜನತೆಗೆ ಕರೆ ನೀಡಿದರು.
ಈ ಸಂದರ್ಭ ಆಶಾ ಫೌಂಡೇಶನ್ನಿನ ಸ್ಟುಡಿಯೋ ಶ್ರೀನಿವಾಸ, ಶ್ರೀ ಸಾಯಿ ಗಂಗಾ ಫೌಂಡೇಶನ್ ಅಧ್ಯಕ್ಷ ಗಂಗಾಧರ, ಕೊರೋನಾ ಸೈನಿಕರಾದ ಮೋಹನ್ ಕುಮಾರ್, ಪ್ರಜ್ವಲ್, ಮೋಹಿತ್, ಅನಿಲ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment