ರಾಯಪುರ (ಕರಾವಳಿ ಟೈಮ್ಸ್) : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್‍ಗಢ ರಾಜ್ಯದ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಶುಕ್ರವಾರ ಮಧ್ಯಾಹ್ನ ರಾಯಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರಿಗೆ ಮೇ 9 ರಂದು ಹೃದಯಾಘಾತವಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ವೆಂಟಿಲೇಟರ್ ಅಳವಡಿಸಲಾಗಿತ್ತು. 74 ವರ್ಷದ ಜೋಗಿ ಅವರಿಗೆ ಬುಧವಾರ ರಾತ್ರಿ ಮತ್ತೊಮ್ಮೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಮೊದಲು ಅಧಿಕಾರಿಯಾಗಿದ್ದ ಜೋಗಿ ಅವರು ನಂತರ ರಾಜಕಾರಣಿಯಾಗಿ ಛತ್ತೀಸ್‍ಗಢ ಅಸ್ತಿತ್ವಕ್ಕೆ ಬಂದ ನಂತರ ನವೆಂಬರ್ 2000 ರಿಂದ 2003 ರ ನವೆಂಬರ್‍ವರೆಗೆ ಕಾಂಗ್ರೆಸ್ ಸರಕಾರದ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
0 comments:
Post a Comment