ಮಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಸೋಂಕು ಹರಡುವಿಕೆ ಭೀತಿಗಾಗಿ ಮಂಗಳೂರಿನಲ್ಲಿ ಖಾಸಗಿ ಬಸ್‍ಗಳು ಕ್ಯಾಶ್‍ಲೆಸ್ ತಂತ್ರಜ್ಞಾನ ಅಳವಡಿಸಿಕೊಂಡಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರಕ್ಕೆ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಚಾರ ನಡೆಸುವ ಖಾಸಗಿ ಬಸ್‍ಗಳು ಲಾಕ್‍ಡೌನ್ ಕಾರಣದಿಂದ ಕಳೆದ ಎರಡು ತಿಂಗಳುಗಳ ಕಾಲ ರಸ್ತೆಗೆ ಇಳಿಯದೆ ಇದ್ದು, ಇದೀಗ ಮತ್ತೆ ಸಂಚಾರಕ್ಕೆ ಸಜ್ಜಾಗಿದೆ. ಇದೀಗ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವಹಿವಾಟು ನಡೆಯಲಿದೆ.
ಬಸ್‍ನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೆ ಉಚಿತವಾಗಿ ಡಿಜಿಟಲ್ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ನಂತರ ಪ್ರಯಾಣಿಕರು ಈ ಕಾರ್ಡ್ ಗೆ ರೀಚಾರ್ಜ್ ಮಾಡಿ ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲಿ ನಿರ್ವಾಹಕರ ಹತ್ತಿರದ ಮೆಷಿನ್ ಗೆ ಕಾರ್ಡ್ ತೋರಿಸಿದರೆ ಸೆನ್ಸಾರ್ ಮೂಲಕ ಟಿಕೆಟ್ ದರ ಕಡಿತಗೊಳ್ಳುತ್ತದೆ. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂಧರ್ಭದಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚಿಲ್ಲರೆ ಕಿರಿಕಿರಿ ಕೂಡ ತಪ್ಪಿದಂತಾಗುತ್ತದೆ.
Where to get the card?
ReplyDelete