ಗ್ರೀನ್‍ನಲ್ಲಿ ಬಸ್, ಆರೆಂಜ್‍ನಲ್ಲಿ ಕ್ಯಾಬ್ ಸಂಚಾರ
ಬೆಂಗಳೂರು (ಕರಾವಳಿ ಟೈಮ್ಸ್) : ಮಹಾಮಾರಿ ಕೊರೊನಾ ಕಂಟ್ರೋಲ್‍ಗೆ ಇನ್ನೂ 2 ವಾರ ಲಾಕ್‍ಡೌನ್ ವಿಸ್ತರಣೆಯಾಗಿದೆ. ದೇಶಾದ್ಯಂತ ಮೇ 17ವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಆದರೆ ಇದೇ ವೇಳೆ ವಲಸೆ ಕಾರ್ಮಿಕರು, ತುರ್ತು ಪ್ರಯಾಣಿಕರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ.
ಕೊರೊನಾ ತೊಲಗಿಸಲು ಕೇಂದ್ರ ಸರ್ಕಾರ 4 ಝೋನ್‍ಗಳಾಗಿ ವಿಂಗಡಣೆ ಮಾಡಿದೆ. ಕಂಟೈನ್‍ಮೆಂಟ್, ರೆಡ್, ಆರೆಂಜ್, ಗ್ರೀನ್ ಝೋನ್ ಅಂತ ವಿಂಗಡಣೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ವಲಸೆ ಕಾರ್ಮಿಕರು, ತುರ್ತು ಪ್ರಯಾಣಿಕರು ತಮ್ಮ ತವರು ಜಿಲ್ಲೆಗಳಿಗೆ ಹೋಗುವರಿಗೆ ಕೇಂದ್ರ ಸರಕಾರ ಬಸ್ ವ್ಯವಸ್ಥೆ ಕಲ್ಪಿಸಿದೆ. ಮೇ 4ರಿಂದ ಅಂದರೆ ಸೋಮವಾರದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವು ಷರತ್ತುಗಳು ಅನ್ವಯಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.
ರಾಯಚೂರು, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಶಿವಮೊಗ್ಗ, ಮೈಸೂರು ಸೇರಿದಂತೆ 28 ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಲಿದೆ. 55 ಸೀಟ್‍ಗಳುಳ್ಳ ಬಸ್‍ನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವನ್ನ ನೀಡಲಾಗಿದೆ. ಟಿಕೆಟ್ ದರ ನಿಗದಿತ ಬೆಲೆಗಿಂತ ಒಂದು ಪಟ್ಟು ಹೆಚ್ಚು ಮಾಡಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ ಸವದಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ.
ಗ್ರೀನ್ ಝೋನ್‍ನಲ್ಲಿ ಶರತ್ತು ಬದ್ದ ಆಟೋ ಸಂಚಾರಕ್ಕೆ ಆವಕಾಶ ಮಾಡಿಕೊಡಲಾಗಿದೆ. ಶೇ. 50 ಬಸ್‍ಗಳ ಸಂಚಾರಕ್ಕೂ ಅವಕಾಶ ನೀಡಲಾಗಿದ್ದು, ಬಸ್ ಡಿಪೆÇೀಗಳು ಕೂಡ ಶೇ.50 ರಷ್ಟು ಸಿಬ್ಬಂದಿ ಜೊತೆ ಕೆಲಸ ಮಾಡಬಹುದು. ದ್ವಿಚಕ್ರ ವಾಹನದಲ್ಲಿ ಒಬ್ಬರು, ಕಾರಿನಲ್ಲಿ ಚಾಲಕ ಸೇರಿ ಇಬ್ಬರಿಗೆ ಮಾತ್ರ ಅವಕಾಶ.
ಆರೆಂಜ್ ಝೋನ್‍ಗಳಲ್ಲಿ ಕಾರು ಮತ್ತು ಬೈಕ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಕಾರ್‍ಗಳಲ್ಲಿ ಡ್ರೈವರ್ ಜೊತೆಗೆ ಇಬ್ಬರು, ಬೈಕ್‍ನಲ್ಲಿ ಒಬ್ಬರು ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಇನ್ನು ಟ್ಯಾಕ್ಸಿಗಳಲ್ಲಿ ಒಬ್ಬರೇ ಪ್ಯಾಸೆಂಜರ್ ಇರಬೇಕು.
ಕೆಂಪು ವಲಯದಲ್ಲಿ ಸೈಕಲ್ ರಿಕ್ಷಾ, ಆಟೋ, ಕ್ಯಾಬ್ ಟ್ಯಾಕ್ಸಿ, ಬಸ್ ಸಂಚಾರ, ಸೆಲೂನು ಸಂಪೂರ್ಣ ಬಂದ್ ಆಗಿದೆ. ಆದರೆ ಖಾಸಗಿ ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಮಾತ್ರ ಸಂಚರಿಸಬಹುದು. ಕ್ಯಾಬ್‍ಗಳಲ್ಲಿ ಒಬ್ಬ ಡ್ರೈವರ್ ಮತ್ತೆ ಒಬ್ಬ ಪ್ರಯಾಣಿಕ ಮಾತ್ರ ಸಂಚರಿಸಬೇಕು. ಇನ್ನೂ ಬೈಕ್‍ಗಳಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.
0 comments:
Post a Comment