ವಿಟ್ಲ (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ಗ್ರಾಮದ ಕರಿಂಕ-ಹೊಸಮನೆ ನಿವಾಸಿ ಭವಾನಿ ಎಸ್. ರೈ (79) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.
ಅನಂತಾಡಿ ಗ್ರಾಮ ಪಂಚಾಯತ್ ಚೆಯರ್ ಮೆನ್ ಆಗಿದ್ದ ದಿವಂಗತ ಸಂಕಪ್ಪ ರೈ ಅವರ ಪತ್ನಿಯಾಗಿರುವ ಭವಾನಿ ರೈ ಅವರು ಅನಂತಾಡಿ ಗ್ರಾಮ ಪಂಚಾಯತಿಯಲ್ಲಿ ಸುಮಾರು 15 ವರ್ಷಗಳ ಕಾಲ ಸದಸ್ಯರಾಗಿ, ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರ ನಿವೃತ್ತ ಪ್ರಾಂಶುಪಾಲ ಜಯರಾಮ ರೈ, ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment