ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡೇಶ್ವಾಲ್ಯ ಸಮೀಪದ ನಚ್ಚಬೆಟ್ಟು ಎಂಬಲ್ಲಿನ ಮನೆಯಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಜಾನುವಾರು ವಧಾ ಗೃಹಕ್ಕೆ ಗುರುವಾರ ದಾಳಿ ನಡೆಸಿದ ಎಸ್ಸೈ ಪ್ರಸನ್ನ ನೇತೃತ್ವದ ಪೊಲೀಸರು ಜಾನುವಾರು, ಮಾಂಸ, ವಾಹನ ಸಹಿತ ಇಬ್ಬರು ಆರೋಪಿಗಳಾದ ಅಬೂಬಕ್ಕರ್ ಹಾಗೂ ಅಬ್ದುಲ್ ರಝಾಕ್ ಎಂಬವರನ್ನು ಬಂಧಿಸಿದ್ದಾರೆ.
ನಚ್ಚಬೆಟ್ಟು ಎಂಬಲ್ಲಿನ ಮನೆಯೊಂದರಲ್ಲಿ ಆರೋಪಿಗಳು ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸವನ್ನು ಅಟೋ ರಿಕ್ಷಾದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು ಸ್ಥಳದಲ್ಲಿದ್ದ 40 ಕೆಜಿ ಮಾಂಸ, ನಾಲ್ಕು ಜಾನುವಾರುಗಳು ಹಾಗೂ ಅಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
0 comments:
Post a Comment