ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ 1ನೇ ವಾರ್ಡ್‍ಗೆ ಸೇರಿದ ಇಜ್ಜಾ ಪ್ರದೇಶ, ಬಾರೆಕಾಡು ಹಾಗೂ ಟಿಪ್ಪು ನಗರದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಇಲ್ಲಿನ ಸುಮಾರು 350 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ರಾಜ್ಯ ಮಾಲಿನ್ಯ ಮಂಡಳಿ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್, ಪುರಸಭಾ ಸದಸ್ಯ ಬಿ ವಾಸು ಪೂಜಾರಿ ಲೋರೆಟ್ಟೋ, ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರೊಡ್ರಿಗಸ್, ಕಾರಬಡೆ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಪ್ರಮುಖರಾದ ಹರೀಶ್ ಕೋಟ್ಯಾನ್, ನಾಗೇಶ್ ಪೂಜಾರಿ, ಹರೀಶ್ ದೇವಾಡಿಗ, ಸುಧಾ ಗೋಪಾಲ್ ಪೂಜಾರಿ, ಯಾಕೂಬ್ ಬಾರೆಕಾಡು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment