ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಲೊರೆಟ್ಟೊಪದವು ಎಂಬಲ್ಲಿ ಪರವಾನಿಗೆ ರಹಿತವಾಗಿ ನಡೆಯುತ್ತಿದ್ದ ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಠಾಣಾ ಎಸ್ಸೈ ಅವಿನಾಶ್ ನೇತೃತ್ವದ ಪೊಲೀಸರು ನಾಲ್ಕು ಜಾನುವಾರು, 2 ಕ್ವಿಂಟಾಲ್ ಮಾಂಸ, ಎರಡು ಕಡಿದು ಹಾಕಿದ ದನದ ತಲೆಗಳು, ಒಂದು ಪಿಕಪ್ ವಾಹನ ಹಾಗೂ ಮಾಂಸ ಮಾಡಲು ಬಳಸುತ್ತಿದ್ದ ಸಲಕರಣೆಗಳ ಸಹಿತ ಆರೋಪಿಗಳಾದ ಸ್ಥಳೀಯ ನಿವಾಸಿಗಳು ಉಮರ್ ಫಾರೂಕ್, ಆದಂ ಹಾಗೂ ಅಶ್ಫಾಕ್ ಎಂಬವರನ್ನು ಬಂಧಿಸಿದ್ದಾರೆ.
ಪೊಲೀಸ್ ದಾಳಿ ವೇಳೆ ವಧಾ ಕೇಂದ್ರದ ಮುಖ್ಯಸ್ಥರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಬಂಧಿತರು ಮಾಂಸ ಮಾಡಿ ವಿಲೇವಾರಿ ಮಾಡುವ ನೌಕರರು ಎಂದು ತಿಳಿದು ಬಂದಿದೆ.
0 comments:
Post a Comment