ಕೊರೋನ ಸಂಕಷ್ಟಕ್ಕೆ ಸ್ಪಂದಿಸಲು ಬಂಟ್ವಾಳ ವರ್ತಕರ ಬ್ಯಾಂಕಿನಿಂದ ಬಡ್ಡಿರಹಿತ ಸಾಲದ ಕೊಡುಗೆ - Karavali Times ಕೊರೋನ ಸಂಕಷ್ಟಕ್ಕೆ ಸ್ಪಂದಿಸಲು ಬಂಟ್ವಾಳ ವರ್ತಕರ ಬ್ಯಾಂಕಿನಿಂದ ಬಡ್ಡಿರಹಿತ ಸಾಲದ ಕೊಡುಗೆ - Karavali Times

728x90

15 May 2020

ಕೊರೋನ ಸಂಕಷ್ಟಕ್ಕೆ ಸ್ಪಂದಿಸಲು ಬಂಟ್ವಾಳ ವರ್ತಕರ ಬ್ಯಾಂಕಿನಿಂದ ಬಡ್ಡಿರಹಿತ ಸಾಲದ ಕೊಡುಗೆ



ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕೊರೋನಾ ಲಾಕ್‍ಡೌನ್ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಸಂಘದ ಸದಸ್ಯರಿಗೆ, ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಉಳ್ಳವರಿಗೆ ಸಂಸ್ಥೆಯ ಅಧೀನದಲ್ಲಿರುವ ತಾಲೂಕಿನ ಎಲ್ಲ 8 ಶಾಖೆಗಳಲ್ಲೂ ಮೇ 16 ರಿಂದ ಜೂನ್ 30ರವರೆಗೆ ಅನ್ವಯವಾಗುವಂತೆ “ಬಡ್ಡಿ ರಹಿತ ಬಂಗಾರದ ಅಡವಿನ ಸಾಲ” ನೀಡಲು ನಿರ್ಣಯ ಕೈಗೊಳ್ಳಲಾಗಿದೆ.

    ಗ್ರಾಂಗೆ ಗರಿಷ್ಠ 3 ಸಾವಿರದವರೆಗೂ ಸಾಲ ನೀಡಲಾಗುವುದು. ಗ್ರಾಹಕರು ಪತ್ರಾಂಕಿತ ಹಾಗೂ ಮೌಲ್ಯಮಾಪನ ಶುಲ್ಕ ಹೊರತುಪಡಿಸಿ ಒಂದು ತಿಂಗಳವರೆಗೆ ಯಾವುದೇ ಬಡ್ಡಿಯನ್ನು ಕಟ್ಟಬೇಕಾಗಿಲ್ಲ. ಸಾಲ ಪಡೆದು 30 ದಿನಗಳವರೆಗೂ ಮರುಪಾವತಿ ಮಾಡದಿದ್ದಲ್ಲಿ ಮುಂದಿನ ಅವಧಿಗೆ ಮಾತ್ರ ಬಡ್ಡಿ ವಿಧಿಸಲಾಗುವುದು.

    ತಾಲೂಕಿನ ಕೈಕಂಬ-ಬಿ ಸಿ ರೋಡು, ಬೈಪಾಸ್-ಬಂಟ್ವಾಳ, ಮೆಲ್ಕಾರ್, ರಾಯಿ-ಸಿದ್ದಕಟ್ಟೆ, ಮಾವಿನಕಟ್ಟೆ-ಸರಪಾಡಿ, ಸಾಲೆತ್ತೂರು, ಸಜಿಪನಡು ಹಾಗೂ ವಾಮದಪದವು ಈ ಎಲ್ಲಾ ಎಂಟು ಶಾಖೆಗಳಲ್ಲೂ ಈ ಸೌಲಭ್ಯವನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448869256 ಅಥವಾ 9980252801 ಗೆ ಸಂಪರ್ಕಿಸಬಹುದು ಎಂದು ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೋನ ಸಂಕಷ್ಟಕ್ಕೆ ಸ್ಪಂದಿಸಲು ಬಂಟ್ವಾಳ ವರ್ತಕರ ಬ್ಯಾಂಕಿನಿಂದ ಬಡ್ಡಿರಹಿತ ಸಾಲದ ಕೊಡುಗೆ Rating: 5 Reviewed By: karavali Times
Scroll to Top