ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡ್ ಸಂಖ್ಯೆ 24 ರ ಬಂಗ್ಲೆಗುಡ್ಡೆ ಎಂಬಲ್ಲಿನ ಕುಡಿಯುವ ನೀರಿನ ಕೊಳವೆ ಬಾವಿ ಕಳೆದ ಕೆಲ ದಿನಗಳಿಂದ ಕೆಟ್ಟು ಹೋದ ಪರಿಣಾಮ ಸ್ಥಳೀಯ ನಿವಾಸಿಗಳು ನೀರಿಗಾಗಿ ಹಾಹಾರಕಾರ ಪಡುವಂತಾಗಿತ್ತು.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಇಲ್ಲಿನ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ಗಮನಕ್ಕೆ ತಂದ ಹಿನ್ನಲೆಯಲ್ಲಿ ತಕ್ಷಣ ಸ್ಪಂದಿಸಿದ ಸಿದ್ದೀಕ್ ಅವರು ಪುರಸಭೆಯ ಮುಖಾಂತರ ಕೆಟ್ಟು ಹೋಗಿದ್ದ ಮೋಟಾರು ಹಾಗೂ ಹಳೆಯ ಪೈಪ್‍ಗಳನ್ನು ಬದಲಾಯಿಸಿ ಹೊಸ ಪಿವಿಸಿ ಪೈಪ್ ಅಳವಡಿಸುವ ಕಾಮಗಾರಿ ಗುರುವಾರ ನಡೆಸಲಾಯಿತು.
ಕಾಮಗಾರಿ ಸಂದರ್ಭ ಸ್ಥಳದಲ್ಲಿ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್, ಸ್ಥಳೀಯರಾದ ಇಸ್ಮಾಯಿಲ್, ಇಬ್ರಾಹಿಂ, ಕೃಷ್ಣಪ್ಪ, ಹುಸೈನ್, ಶರೀಫ್, ಇರ್ಫಾನ್, ರಹೀಂ, ಅಬ್ದುಲ್ ಹಮೀದ್ ಮೋನು, ಮನ್ಸೂರ್ ಮೊದಲಾದವರು ಜೊತೆಗಿದ್ದರು.
0 comments:
Post a Comment