ಬಡಗನ್ನೂರು (ಕರಾವಳಿ ಟೈಮ್ಸ್) : ಎಸ್.ವೈ.ಎಸ್, ಎಸ್.ಎಸ್.ಎಫ್. ಬಡಗನ್ನೂರು ಯೂನಿಟ್ ವತಿಯಿಂದ ಪರಿಸರದ ಜಾತಿ ಮತ ಭೇದ ಭಾವವಿಲ್ಲದೆ ಸರ್ವ ಬಡ ಕುಟುಂಬಗಳಿಗೆ ಉಚಿತ ಔಷಧಿ ವಿತರಣೆ, ರೋಗಿಗಳಿಗೆ ಹಾಸ್ಪಿಟಲ್ ಬಿಲ್ ವೆಚ್ಚ, ಮದುವೆ ಸಹಾಯ ಧನ, ಕೊರೋನ ಸಮಯದಲ್ಲಿ ಆಹಾರ ಸಾಮಾಗ್ರಿ ವಿತರಣೆ ಹಾಗೂ ಹಲವಾರು ಸಹಾಯಸ್ತ ನೀಡಲಾಯಿತು. ಮೂರನೇ ಹಂತದಲ್ಲಿ ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್ ಕಾರ್ಯಕರ್ತರಿಗೆ ರಂಝಾನ್ ಹಾಗೂ ಈದ್ ಕಿಟ್ ವಿತರಿಸಲಾಯಿತು.
ಸೆಕ್ಟರ್ ಅಧ್ಯಕ್ಷ ಅಬೂಬಕ್ಕರ್ ಸಅದಿ ಅಲ್-ಲತೀಫಿ ಪಮ್ಮಲೆ ಕಾರ್ಯಕ್ರಮ ಉದ್ಘಾಟಿಸಿದರು. ಇಬ್ರಾಹಿಂ ಮದನಿ ಪಮ್ಮಲೆ ದುಆ ನೆರವೇರಿಸಿದರು. ಹಸೈನಾರ್ ಬಿ.ಟಿ., ಅಬೂಬಕ್ಕರ್ ಪುಲಿತ್ತಡಿ, ಶೆರೀಫ್ ಪಿ.ಎಚ್., ರಫೀಕ್ ಕವುಂಜ, ಇಸ್ಮಾಯಿಲ್ ಪಮ್ಮಲೆ, ಅಬ್ದುಲ್ ರಝಾಕ್ ಪಾಲಡ್ಕ, ಲತೀಫ್ ಪಿ.ಎಚ್., ಮಹಮ್ಮದ್ ಪಿ.ಎಚ್., ಜೌಹರ್ ಡೆಂಬಲೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment