ಬಂಟ್ವಾಳ (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರಾಯಿ, ಪಂಜಿಕಲ್ಲು, ವಾಮದಪದವು ವಲಯದ ಎಲ್ಲಾ ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ ನಡೆಯಿತು.
ಊರಿನ ಜನರಲ್ಲಿ ಕೊವಿಂಡ್ 19 ಬಗ್ಗೆ ಜಾಗೃತಿ ಮೂಡಿಸಿ ಗ್ರಾಮದ ಜನತೆಯ ಆರೋಗ್ಯಕ್ಕಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತರಿಗೆ ರಾಯಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವರು ಶಾಲು ಹೊದಿಸಿ ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಗೌರವಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಬಿ. ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕ ಶೆಟ್ಟಿ, ಪ್ರಮುಖರಾದ ಮಂಜುಳಾ ಸದಾನಂದ್, ಜಗದೀಶ್ ಕೊಯಿಲ, ಸುಧೀರ್ ಶೆಟ್ಟಿ, ಅಶ್ರಫ್ ಕುಟ್ಟಿಕಳ, ದಿನೇಶ್ ಸುಂದರ್ ಶಾಂತಿ, ದಿನೇಶ್ ಶೆಟ್ಟಿಗಾರ್, ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಕುತ್ಲೋಡಿ, ಯತೀಶ್ ಶೆಟ್ಟಿ, ಸುರೇಶ್ ಪೂಜಾರಿ ಜೋರ, ಸದಾನಂದ್ ಶೀತಲ್, ದೇವಪ್ಪ ಕರ್ಪೆ, ಗಣೇಶ್ ನಾಯಕ್ ಕರ್ಪೆ, ಶೋಭಾ ಎನ್ ಸಪಲ್ಯ, ಕೆ.ಪಿ. ಲೋಬೊ, ಜಯಶ್ರೀ ಸಿಸ್ಟರ್ ಮೊದಲಾದವರು ಉಪಸ್ಥಿತರಿದ್ದರು
0 comments:
Post a Comment