ಆಝಾನ್ ಇಸ್ಲಾಮಿನ ಅವಿಭಾಜ್ಯ ಅಂಗ, ಸ್ಪೀಕರ್ ರಹಿತ ಆಝಾನ್‍ಗೆ ಕೋರ್ಟ್ ಸಮ್ಮತಿ
ಅಲಹಾಬಾದ್ (ಕರಾವಳಿ ಟೈಮ್ಸ್) : ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಆಝಾನ್ ಕರೆಯುವುದನ್ನು ನಿರ್ಬಂಧಿಸಿ ಉತ್ತರ ಪ್ರದೇಶದ ಅಲ್ಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಗಾಜಿಪುರ್, ಹಥ್ರಾಸ್, ಫರೂಖಾಬಾದ್‍ಗಳಲ್ಲಿನ ಮಸೀದಿಗಳಲ್ಲಿ ಆಝಾನ್‍ಗೆ ನಿರ್ಬಂಧ ವಿಧಿಸುವುದರ ಕುರಿತು ನಡೆಸಿದ ಅರ್ಜಿ ವಿಚಾರಣೆಯಲ್ಲಿ ಕೋರ್ಟ್ ಈ ತೀರ್ಪು ನೀಡಿದೆ. ಮೂರು ಜಿಲ್ಲಾ ನ್ಯಾಯಾಲಯಗಳು ನೀಡಿದ ಆದೇಶವನ್ನು ಹಿಂತೆಗೆದುಕೊಂಡಿರುವ ಅಲ್ಲಹಾಬಾದ್ ಹೈಕೋರ್ಟ್ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಆಝಾನ್ ಕರೆಯುವುದನ್ನು ನಿರ್ಬಂಧಿಸಿದೆ. ಆದರೆ ವ್ಯಕ್ತಿಗಳು ಲೌಡ್ ಸ್ಪೀಕರ್ ರಹಿತವಾಗಿ ಆಝಾನ್ ಕರೆಯುವುದು ಸರಿಯಾದ ಕ್ರಮವಾಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.
ಆಝಾನ್ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ. ಆದರೆ ಧ್ವನಿ ವರ್ಧಕಗಳ ಮೂಲಕ ಆಝಾನ್ ಕರೆಯುವುದು ಧರ್ಮದ ಅವಿಭಾಜ್ಯ ಅಂಗ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾ. ಶಶಿಕಾಂತ್, ಅಜಿತ್ ಕುಮಾರ್ ತೀರ್ಪಿನಲ್ಲಿ ಹೇಳಿದ್ದಾರೆ.
0 comments:
Post a Comment