ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ |
ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಈ ಸಂದರ್ಭ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಪ್ರಯಾಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಂದ ವಂಚಿತಗಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಕಾರ್ಮಿಕರ ಕಲ್ಯಾಣ ನಿಧಿ ಸಮರ್ಪಕವಾಗಿ ಬಳಸಿಕೊಳ್ಳಲು ಇದು ಸಕಾಲ ಎಂದು ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಹೇಳಿದ್ದಾರೆ.
ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿಯೇ ಇರುವ ಕಾರ್ಮಿಕರ ಕಲ್ಯಾಣ ನಿಧಿ, ಇಎಸ್‍ಐ ಹಾಗೂ ಪ್ರೊವಿಡೆಂಟ್ ಫಂಡ್‍ಗಳು ಇಂದಿನ ಲಾಕ್‍ಡೌನ್ ಸಂದರ್ಭ ಸಮಪರ್ಕವಾಗಿ ಬಳಕೆಯಾಗಬೇಕು. ಈ ರೀತಿಯಾದಾಗ ಕಾರ್ಮಿಕರ ಹಿತ ತನ್ನಷ್ಟಕ್ಕೆ ಕಾಪಾಡಿದಂತಾಗುವುದು ಎಂದವರು ಹೇಳಿದ್ದಾರೆ.
0 comments:
Post a Comment