ಸ್ಯಾನ್ ಫ್ರಾನ್ಸಿಸ್ಕೋ (ಕರಾವಳಿ ಟೈಮ್ಸ್) : ಕೊರೊನಾ ಕುರಿತ ಸುಳ್ಳು ಸುದ್ದಿಗಳು ಮಾರಕವಾಗಿ ಶೇರ್ ಆಗುತ್ತಿರುವ ಹಿನ್ನೆಲೆಯಲ್ಲಿ ವೈರಲ್ ಆಗುತ್ತಿರುವ ಫಾರ್ವರ್ಡ್ ಮೆಸೇಜ್ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ.
ಕೊರೊನಾದಿಂದ ಸಾಮಾಜಿಕ ಜಾಲತಾಣಗಳ ಜೊತೆ ಮೆಸೇಜಿಂಗ್ ಅಪ್ಲಿಕೇಶನ್‍ಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆಪ್ ವಾಟ್ಸಪ್‍ನಲ್ಲಿ ಸಂದೇಶಗಳ ಪ್ರವಾಹವೇ ಆಗುತ್ತಿದೆ. ಸಂದೇಶಗಳ ಪೈಕಿ ಸುಳ್ಳು ಮಾಹಿತಿ ಇರುವ ಅತಿ ಹೆಚ್ಚು ಶೇರ್ ಆಗಿರುವ ಪೆÇೀಸ್ಟ್‍ಗಳನ್ನು ನಿಯಂತ್ರಿಸಲು ಒಬ್ಬರಿಗೆ ಮಾತ್ರ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ. ವಾಟ್ಸಪ್ ವಕ್ತಾರರು ಪ್ರತಿಕ್ರಿಯಿಸಿ, ಅನಿರ್ಧಿಷ್ಟಾವಧಿವರೆಗೆ ಹೊಸ ಮಿತಿ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಭಾರತದಲ್ಲಿ ಗುಂಪು ಗಲಾಟೆಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಗರಿಷ್ಟ 20 ಜನರಿಗೆ ಸೆಂಡ್ ಮಾಡುವ ಮೆಸೇಜ್‍ಗಳ ಮಿತಿಯನ್ನು ವಾಟ್ಸಪ್ ಕೇವಲ 5 ಜನರಿಗೆ ಮಾತ್ರ ಕಳುಹಿಸುವಂತೆ ಕಡಿತಗೊಳಿಸಿತ್ತು. ಇದರಿಂದಾಗಿ ಶೇ. 25 ರಷ್ಟು ಸುಳ್ಳು ಸುದ್ದಿಗಳು ಹಂಚಿಕೆಯಾಗುವುದು ಕಡಿಮೆಯಾಗಿತ್ತು.
ಇದರ ಜೊತೆ ವೈರಲ್ ಆಗಿರುವ ಮತ್ತು ಅತಿ ಹೆಚ್ಚು ಶೇರ್ ಮಾಡಿರುವ ಮೆಸೇಜ್‍ಗಳು ಬಳಕೆದಾರರರಿಗೆ ಸುಲಭವಾಗಿ ತಿಳಿಯಲು ಎರಡು ಬಾಣಗಳ (ಡಬಲ್ ಆರೋಸ್) ಐಕಾನ್‍ಗಳನ್ನು ಪರಿಚಯಿಸಿತ್ತು. ವೈರಲ್ ಮೆಸೇಜ್ ಸೆಂಡ್ ಮಾಡುವ ಸಮಯದಲ್ಲಿ ತೆರೆಯುವ ಪುಟದ ಆರಂಭದಲ್ಲಿ “ಈ ಮೆಸೇಜ್ ಅತಿ ಹೆಚ್ಚು ಸಂಖ್ಯೆಯಲ್ಲಿ ಹಂಚಿಕೆಯಾಗಿದ್ದಕ್ಕೆ ಮಾರ್ಕ್ ಮಾಡಲಾಗಿದೆ” ಎಂದು ಬರೆದಿರುತ್ತದೆ. ಈ ಸಾಲನ್ನು ನೋಡಿಕೊಂಡು ಈ ಸಂದೇಶವನ್ನು ಕಳುಹಿಸಬೇಕೇ? ಬೇಡವೇ ಎಂದು ತೀರ್ಮಾನ ಮಾಡಬಹುದು.
0 comments:
Post a Comment