ಲಖನೌ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಮಧ್ಯೆ ಉತ್ತರ ಪ್ರದೇಶದಲ್ಲಿ ಮಹಾತಾಯಿಯೋರ್ವರು ತನ್ನ ಎರಡನೇ ಹೆರಿಗೆಯಲ್ಲಿ ಐದು ಮಂದಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಉತ್ತರಪ್ರದೇಶದ ಬರಬಂಕಿಸ್ ಕಮ್ಯೂನಿಟಿ ಹೆಲ್ತ್ ಸೆಂಟರ್‍ನಲ್ಲಿ ಕುತ್ಲೂಪೂರ್ ನಿವಾಸಿ ಕುಂದನ್ ಎಂಬವರ ಪತ್ನಿ ಅನಿತಾ ಅವರೇ ಎರಡು ಗಂಡು ಹಾಗೂ ಮೂರು ಹೆಣ್ಣು ಸಹಿತ ಐದು ಮಕ್ಕಳಿಗೆ ನೀಡಿದ ಮಹಾತಾಯಿ.
ಸಿಎಚ್‍ಸಿ ಆಸ್ಪತ್ರೆಯ ನರ್ಸ್‍ಗಳ ಪ್ರಕಾರ, ಅನಿತಾ ಅವರಿಗೆ ಇದು ಎರಡನೇ ಹೆರಿಗೆಯಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಐದು ಮಕ್ಕಳಿಗೆ ಅನಿತಾ ಜನ್ಮ ನೀಡಿದ್ದಾರೆ.
ಐದು ಮಕ್ಕಳ ಪೈಕಿ ಎರಡು ಶಿಶುಗಳ ತೂಕ 1.2 ಕೆಜಿ ಇದ್ದು, ಇನ್ನೆರೆಡು 900 ಗ್ರಾಂ ತೂಕ ಇದೆ, ಮತ್ತೊಂದು ಮಗು 800 ಗ್ರಾಂ ತೂಕ ಇದೆ. ಐದು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
0 comments:
Post a Comment