ಮಂಗಳೂರು (ಕರಾವಳಿ ಟೈಮ್ಸ್) : ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ವಿರುದ್ದ ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮಾಡುತ್ತಿರುವ ಟ್ರೋಲ್‍ಗಳ ಬಗ್ಗೆ ಶಾಸಕ ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗರಂ ಆಗಿಯೇ ಪ್ರತಿಕ್ರಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಖಾದರ್, ನನ್ನ ಟ್ರೋಲ್ ಮಿತ್ರರು, ಟೀಕಿಸುವವರು, ಪುಕ್ಸಟ್ಟೆ ಪ್ರಚಾರ ಪ್ರಿಯರಿಗೆ ನನ್ನ ಟ್ವೀಟ್ ಫುಲ್ ಮೀಲ್ಸ್ ಸಿಕ್ಕಂತಾಗಿದೆ. ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥೈಸುವ ಸಾಮಥ್ರ್ಯವಿಲ್ಲದೆ ತಮ್ಮಿಷ್ಟದಂತೆ ವ್ಯಾಖ್ಯಾನಿಸಿ ಬೊಬ್ಬೆ ಹೊಡೆಯುವವರ ಬಾಯಿಗೆ ನಾನಂತೂ ಬೀಗ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
ಗಾಂಧಿಯನ್ನೇ ಪ್ರಶ್ನಿಸಿದ, ಬುದ್ಧನನ್ನೇ ಬೈದು, ಅಬ್ದುಲ್ ಕಲಾಂರವರನ್ನೇ ಕುಹುಕಿದ, ಪೇಜಾವರರು ಕರೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಮುಸ್ಲಿಂ ಬಂಧುಗಳನ್ನು ವಿರೋಧಿಸಿದ, ಶಾಸಕ ಮಿತ್ರ ತನ್ವೀರ್ ಸೇಠ್‍ಗೆ ಹಲ್ಲೆಗೈದ, ಶಾಂತಿ ಕೋರಿದ ಖಾಝಿ ಹಾಗೂ ಉಲಮಾಗಳನ್ನು ಬೆದರಿಸಿ ನಿಂದಿಸುವವರು, ನನ್ನಂತ ಸಾಮಾನ್ಯರನ್ನು ಅದೇಗೆ ಬಿಟ್ಟಾರು? ಟೀಕಿಸದೇ ಬಿಡುವುದತ್ತಾರಾ? ಇದಕ್ಕೆಲ್ಲಾ ತಲೆಕೆಡಿಸುತ್ತಾ ಹೋದರೆ ನಮಗೆ ನಮ್ಮ ಕೆಲಸ-ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ ಎಂದ ಯು ಟಿ ಖಾದರ್, ನಮಗೆ ದೇವರು ನೀಡಿದ ಅವಕಾಶದಲ್ಲಿ ದೇವನನ್ನು ಮೆಚ್ಚಿಸಲು ಮಾಡಬೇಕಾದ ಹಲವಾರು ಜನಪರ ಕಾರ್ಯಗಳಿವೆ. ಟೀಕಿಸುವವರ ಟೀಕೆಗೆ ಉತ್ತರಿಸುತ್ತಾ ಕೂತರೆ ನಮ್ಮಿಂದ ಸೇವೆ ಬಯಸುವ ಅದೆಷ್ಟೋ ಬಡಬರು, ಶೋಷಿತರು ಗತಿ ಇಲ್ಲದಂತಾದಾರು ಎಂಬ ಭಯ ನನ್ನನ್ನು ಸದಾ ಕಾಡುತ್ತಿರುತ್ತದೆ. ಆದ್ದರಿಂದ ಸಾಮಾಜಿಕ ತಾಣಗಳ ವಿಕೃತ ಸಂತೋಷಪಡುವವರ ಬಗ್ಗೆ ದಯವಿಟ್ಟು ಯಾರೂ ಕೂಡಾ ನನ್ನ ಬಳಿ ಪ್ರತಿಕ್ರಿಯೆ ಕೇಳದೆ ನನ್ನೊಂದಿಗೆ ಸಹಕರಿಸುವಂತೆ ಹೇಳಿಕೆ ಮೂಲಕ ಯು ಟಿ ಖಾದರ್ ಕೋರಿದ್ದಾರೆ.
0 comments:
Post a Comment