ಮಂಗಳೂರು (ಕರಾವಳಿ ಟೈಮ್ಸ್) : ರಿಕ್ಷಾ ಚಾಲಕ-ಮಾಲಕರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಂಗಳೂರು ಶಾಸಕ ಯು.ಟಿ. ಖಾದರ್ ತನ್ನ ಕ್ಷೇತ್ರ ವ್ಯಾಪ್ತಿಯ ರಿಕ್ಷಾ ಚಾಲಕ-ಮಾಲಕರಿಗೆ ರೇಶನ್ ಕಿಟ್ ವಿತರಿಸಿ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಅವರು ಸರಕಾರದಿಂದ ರಿಕ್ಷಾ, ಟೆಂಪೆÇೀ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಹಾಗೂ ಟೈಲರ್‍ಗಳಂತಹ ದಿನಗೂಲಿಯಿಂದ ಜೀವನ ನಡೆಸುವವರಿಗೆ ಸಹಕಾರ ನೀಡುವುದು ಸರಕಾರದ ಕರ್ತವ್ಯ. ಆದರೆ ಸರಕಾರ ಸಹಕಾರ ನೀಡುವಲ್ಲಿ ವಿಫಲವಾಗಿದ್ದರಿಂದ ಖುದ್ದು ನಾನೇ ನನ್ನ ಕ್ಷೇತ್ರದ ಜನರಿಗೆ ಪ್ರಥಮ ಹಂತದಲ್ಲಿ ಸಾವಿರಾರು ಆಟೋ ಚಾಲಕರಿಗೆ ರೇಶನ್ ಕಿಟ್ ವಿತರಿಸಿದ್ದೇನೆ. ಹಸಿವಿನ ದಾಹ ಅರಿತವರು ಕಿಟ್ ತೆಗೆದುಕೊಂಡು ಹೋಗಲು ಬಂದಿದ್ದು ಅಂತರ ಕಾಪಡುವಲ್ಲಿ ಸ್ವಲ್ಪ ಮಟ್ಟಿಗೆ ಕಷ್ಟವಾಗಿದೆ. ಇಲ್ಲಿ ಕೊರೋನಾ ಮಾರಿಗಿಂತ ಹಸಿವಿನಿಂದ ಬಳಲುವವರೆ ಅಧಿಕ ಜನರಿದ್ದಾರೆ. ಇವತ್ತಿನ ಕಾರ್ಯಕ್ರಮದ ಮೂಲಕವಾದರು ಸರಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಎರಡು ಗಂಟೆ ಬಿಸಿಲಿನಲ್ಲಿ ನಿಂತು ಸಂಸಾರದ ಹೊಟ್ಟೆ ತುಂಬಿಸಲು ಬಂದ ರಿಕ್ಷಾ ಚಾಲಕರ ಪರಿಸ್ಥಿತಿ ಜಿಲ್ಲಾಡಳಿತ ಹಾಗೂ ಸರಕಾರ ಗಮನಿಸಬೇಕು ಎಂದು ಆಗ್ರಹಿಸಿದರು.
ಇದು ಕೇವಲ ರೇಷನ್ ಕಿಟ್ ವಿತರಣೆಯ ಕಾರ್ಯಕ್ರಮವಲ್ಲ. ಸರಕಾರ ಮತ್ತು ಜಿಲ್ಲಾಡಳಿತ ಕಣ್ಣು ತೆರೆಯುವ ಸಮಯ. ಎಲ್ಲಾ ದಿನಗೂಲಿ ನೌಕರರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕುರಿತು ಮಾತನಾಡುವವರಿಗೆ ಹಸಿವಿನ ಸಂಕಟ ಅರ್ಥವಾಗುವುದಿಲ್ಲ ಏಕೆ ಎಂದು ಪ್ರಶ್ನಿಸಿದ ಖಾದರ್ ಸರಕಾರದಿಂದ ಸಹಕಾರ ಸಿಕ್ಕಿದ್ದರೆ ಇವತ್ತು ಕಿಟ್‍ಗಾಗಿ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿರಲಿಲ್ಲ. ಕಿಟ್ ಪಡೆದುಕೊಳ್ಳಲು ಬಂದವರು ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿದ್ದು ಮನೆಗೆ ತೆರಳಿದ ಮೇಲೂ ಎಚ್ಚರ ವಹಿಸುತ್ತಾರೆಂಬ ಭರವಸೆ ಇದೆ.
ಕೇವಲ ವಾಟ್ಸಪ್ ಸಂದೇಶದಿಂದ ಬಂದ ಇಷ್ಟೊಂದು ಜನರ ಹಸಿವಿನ ಸಂಕಟ ಸರಕಾರಕ್ಕೆ ಅರಿವಿಲ್ಲ. ಹಸಿವಿನಿಂದ ಬಡಪಾಯಿ ದಿನ ಕಳೆದರೆ ಅದಕ್ಕೆ ಹೊಣೆ ಸರಕಾರವೇ ಆಗಿದೆ. ಇದು ಕೇವಲ ನನ್ನ ಕ್ಷೇತ್ರದ ಉಳ್ಳಾಲ ನಗರ ವ್ಯಾಪ್ತಿಯ ಜನರಿಗೆ ಹಂಚಲಾಗಿದ್ದು ಗ್ರಾಮೀಣ ಪ್ರದೇಶ ಇನ್ನಷ್ಟು ಬಾಕಿ ಇದೆ. ಎಲ್ಲಾ ಹಂತದಲ್ಲೂ ಕಿಟ್ ವಿತರಣೆಗೆ ಸ್ಥಳ ನಿಗದಿಯಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡೇ ವಿತರಣೆ ಮಾಡಲಾಗುವುದು ಎಂದು ಶಾಸಕ ಖಾದರ್ ಹೇಳಿದರು.
0 comments:
Post a Comment