ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿಗಳಾದ ಪ್ರಭಾಕರ ಮಯ್ಯ ಹಾಗೂ ನಾರಾಯಣ ಮಯ್ಯ ಅವರ ಮನೆಗೆ ರಸ್ತೆ ಬದಿಯಲ್ಲಿದ್ದ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ಬುಧವಾರ ಅಪರಾಹ್ನ ಸಂಭವಿಸಿದೆ.
ಇಲ್ಲಿನ ರಸ್ತೆ ಬದಿಯಲ್ಲಿದ್ದ ಪುರಾತನ ತೆಂಗಿನ ಮರ ಹಠಾತ್ ಆಗಿ ಮುರಿದು ಬಿದ್ದಿದ್ದು, ನೇರವಾಗಿ ಮಯ್ಯ ಅವರ ಮನೆಯ ಶೀಟಿನ ಮೇಲೆ ಬಿದ್ದಿದೆ. ಘಟನೆಯಿಂದ ಮನೆಯ ಅಂಗಳಕ್ಕೆ ಅಳವಡಿಸಿದ್ದ ತಗಡು ಶೀಟು ಹಾಗೂ ಮನೆಯ ಮಾಡಿನ ಹಂಚಿಗೆ ಹಾನಿ ಉಂಟಾಗಿದ್ದು, ಸುಮಾರು 30 ಸಾವಿರ ರೂಪಾಯಿಯಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪುರಸಭಾ ಸ್ಥಳೀಯ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಹಾಗೂ ಬಂಟ್ವಾಳ ಯುವ ಕಾಂಗ್ರೆಸ್ ಪ್ರಮುಖ ಇರ್ಶಾದ್ ಅವರುಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ತಹಶೀಲ್ದಾರ್ ಹಾಗೂ ಪಾಣೆಮಂಗಳೂರು ಗ್ರಾಮಕರಣಿಕರಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment