ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿನ ನಿವಾಸಿ ಮೋನಪ್ಪ ಎಂಬವರ ಜಮೀನಿನಲ್ಲಿರುವ ಬಾವಿಗೆ ಬಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಮಜಿ ನಿವಾಸಿ ಮೋನಪ್ಪ ಎಂಬವರ ಜಮೀನಿನಲ್ಲಿರುವ ಸುಮಾರು 6 ಅಡಿ ಆಳದ ಬಾವಿಗೆ ರಾತ್ರಿ ವೇಳೆ ಬಿದ್ದ ಚಿರತೆ ಮೇಲೆ ಬರಲಾಗದೆ ಒದ್ದಾಟ ನಡೆಸುತ್ತಿತ್ತು. ಘಟನೆ ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಬಂಟ್ವಾಳ ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಹಾಗೂ ಪೆÇೀಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ, ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಎರಡು ವರ್ಷ ಮರಿ ಚಿರತೆ ಇದಾಗಿದೆ ಎಂದು ಪರೀಕ್ಷೆ ನಡೆಸಿದ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ರಕ್ಷಿಸಿದ ಚಿರತೆ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿಗಳಾದ ಶ್ರೀಧರ್, ಪ್ರೀತಂ, ಜಿತೇಶ್, ಬಾಸ್ಕರ್, ವಿನಯ್, ಬಂಟ್ವಾಳ ಗ್ರಾಮಾಂತರ ಪಿಎಸೈ ಪ್ರಸನ್ನ, ಟ್ರಾಫಿಕ್ ಪಿಎಸ್ಸೈ ರಾಜೇಶ್ ಕೆ.ವಿ., ಸಿಬ್ಬಂದಿ ಜನಾರ್ಧನ, ಕಿರಣ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ಸಂದರ್ಭ ಭಾಗವಹಿಸಿದ್ದರು.
0 comments:
Post a Comment