ಮಂಗಳೂರಿನ ವಸತಿ ಸಮುಚ್ಚಯದಲ್ಲಿ ವಿಲಕ್ಷಣ ಘಟನೆ
ಮಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್ ಸಂದರ್ಭ ನಗರದ ಅಪಾರ್ಟ್‍ಮೆಂಟಿನಲ್ಲಿ ಒಂಟಿಯಾಗಿ ವಾಸ್ತವ್ಯ ಹೊಂದಿದ್ದ ವಿದ್ಯಾರ್ಥಿಯೋರ್ವ ಬೋರ್ ಆಗುತ್ತದೆ ಎಂದು ತನ್ನ ಸ್ನೇಹಿತನನ್ನು ಸೂಟ್‍ಕೇಸಿನೊಳಗೆ ತುಂಬಿಸಿಕೊಂಡು ತನ್ನ ರೂಮಿಗೆ ಕೊಂಡೊಯ್ಯಲು ಯತ್ನಿಸಿ ಸಿಕ್ಕಿ ಬಿದ್ದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ನಗರದ ಅಪಾರ್ಟ್‍ಮೆಂಟಿನಲ್ಲಿ ವಾಸ್ತವ್ಯ ಇರುವವರನ್ನು ಹೊರತುಪಡಿಸಿ ಅನ್ಯರನ್ನು ಅಪಾರ್ಟಿನೊಳಕ್ಕೆ ಪ್ರವೇಶಿಸಲು ಬಿಡುತ್ತಿಲ್ಲ. ಈ ಕಾರಣದಿಂದಾಗಿ ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ವಿದ್ಯಾರ್ಥಿಯೊಬ್ಬ ಬೋರ್ ಆಗುತ್ತಿದೆ ಎಂದು ತನ್ನ ಗೆಳೆಯನನ್ನು ಕರೆದುಕೊಂಡು ಬರುವುದಾಗಿ ಸಮುಚ್ಚಯದ ಮ್ಯಾನೇಜರ್ ಬಳಿ ಕೇಳಿಕೊಂಡಿದ್ದನಾದರೂ ಅದಕ್ಕೆ ನಿರಾಕರಿಸಲಾಗಿತ್ತು.
ಇದರಿಂದ ಕಂಗಾಲಾದ ವಿದ್ಯಾರ್ಥಿ ಹೈಟೆಕ್ ಚಿಂತನೆ ನಡೆಸಿ ತನ್ನ ಗೆಳೆಯನನ್ನು ಸೂಟ್‍ಕೇಸ್‍ನಲ್ಲಿ ತುಂಬಿಸಿ ಕರೆ ತರುವ ಪ್ರಯತ್ನ ಮಾಡಿದ್ದಾನೆ. ಆದರೆ ಕರೆ ತರುವಾಗ ಸೂಟ್‍ಕೇಸ್ ಅಲುಗಾಡುವುದನ್ನು ಕಂಡ ಸಮುಚ್ಚಯದವರು ಸೂಟ್‍ಕೇಸ್ ತೆರೆಯುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ವಿದ್ಯಾರ್ಥಿ ಕೊನೆಗೂ ಒತ್ತಾಯದ ಮೇರೆಗೆ ಸೂಟ್‍ಕೇಸ್ ತೆರೆದಾಗ ಅದರೊಳಗೆ ಗೆಳೆಯ ಇರುವುದು ಬಯಲಾಗಿದೆ. ತಕ್ಷಣ ಸಮುಚ್ಚಯದ ಮಂದಿ ಕದ್ರಿ ಠಾನಾ ಪೆÇಲೀಸರಿಗೆ ಮಾಹಿತಿ ನೀಡಿದ್ದು, ಪೆÇಲೀಸರು ಧಾವಿಸಿ ಸೂಟ್‍ಕೇಸ್ ಸಹಿತ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
0 comments:
Post a Comment