ಶಿವಮೊಗ್ಗ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಗರದಲ್ಲಿ ಇಂದಿನಿಂದ ಸೆಕ್ಟರ್ ವೈಸ್ ಲಾಕ್ಡೌನ್ ಕೈಗೊಳ್ಳಲಾಗಿದೆ. ನಗರ ಪ್ರದೇಶದ ಜನರು *ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಡೆಯಲು ಪೊಲೀಸ್ ಇಲಾಖೆ ಸೆಕ್ಟರ್ ವೈಸ್ ಲಾಕ್ ಡೌನ್ಗೆ ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಎಸ್ಪಿ ಕೆ.ಎಂ. ಶಾಂತರಾಜು ಮಾತನಾಡಿ, ಜಿಲ್ಲೆಯಲ್ಲಿ ಈ ತನಕ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಹಾಗಂತ ಲಾಕ್ ಡೌನ್ ಸಮಯದಲ್ಲಿ ಜನರು ಅನಗತ್ಯವಾಗಿ ಓಡಾಡುವುದು ಸರಿಯಲ್ಲ. ಅಗತ್ಯ ಹಾಗೂ ತುರ್ತು ಸಂದರ್ಭ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಮನೆಯಲ್ಲಿರಿ ಎಂಬ ಮನವಿ ಮಾಡಿದ್ದರೂ, *ಜನರು ಸುಖಾಸುಮ್ಮನೆ ಮನೆಯಿಂದ ಹೊರಬಂದು ಓಡಾಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಇಂದಿನಿಂದ ಸೆಕ್ಟರ್ ವೈಸ್ ಲಾಕ್ಡೌನ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.*
ಸೆಕ್ಟರ್ ವೈಸ್ ಲಾಕ್ಡೌನ್ ಜಾರಿಗೊಳಿಸಲಾಗಿರುವ ಕಾರಣ ಅವರಿರುವ ಜಾಗ ಹೊರತುಪಡಿಸಿ ಬೇರೆ ಕಡೆ ಓಡಾಡಬಾರದು. ಏಕೆಂದರೆ ನಗರದ ಬಹುತೇಕ ಪ್ರದೇಶದಲ್ಲಿ ಸ್ಥಳೀಯವಾಗಿಯೇ ತರಕಾರಿ, ಹಣ್ಣು, ದಿನಸಿ ಮತ್ತಿತರ ವಸ್ತುಗಳು ಸಿಗುತ್ತಿವೆ. ಹಾಗಾಗಿ ಯಾರೂ ತಾವಿರುವ ಸ್ಥಳದಿಂದ ಬೇರೆ ಕಡೆ ಓಡಾಡಬಾರದು. ಹಾಗೊಮ್ಮೆ ಓಡಾಡಿದರೆ ಅಂಥವರ ವಾಹನ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ರಕ್ಷಾಣಾಧಿಕಾರಿ ಕೆ ಎಂ ಶಾಂತರಾಜು ಖಡಕ್ ಎಚ್ಚರಿಕೆ ನೀಡಿದ್ದಾರೆ.
0 comments:
Post a Comment